ಆಯೀ,
ಬಹಳ ದಿನಗಳಿಂದ ನಿನ್ನ ಜೊತೆ ಮಾತನಾಡಬೇಕು ಎಂದುಕೊಂಡಿದ್ದೆ .ಸಮಯವಿಲ್ಲ ಎಂದು ಹೇಗೆ ಸುಳ್ಳು ಹೇಳಲಿ? ಬಹುಷಃ ದೇವರು ಒಬ್ಬನನ್ನು ಬಿಟ್ಟರೆ ಬೇರೆ ಯಾರಿಗೂ ಸಮಯದ ಕೊರತೆಯಿಲ್ಲ.ನೀನು ಕಾಯುತ್ತಿರುತ್ತೀಯ ಎಂದು ತಿಳಿದಿತ್ತು.ಆದರೂ ಆಯಿ ಅಲ್ಲವಾ,ಕ್ಷಮಿಸುತ್ತಾಳೆ ಎನ್ನುವ ನಂಬಿಕೆ.ಇಂಗ್ಲೀಷಿನಲ್ಲಿ ಒಂದು ಹೇಳಿಕೆ ಇದೆ.taken it for granted ಎಂದು.ನಿನ್ನ ಪ್ರೀತಿಯನ್ನು ಸಹ ನಾನು ಹಾಗೇ ತೆಗೆದುಕೊಂಡಿದ್ದೆ.ಇಂದು ನಾಳೆ ಎಂದುಕೊಂಡು ನಾಲ್ಕು ತಿಂಗಳುಗಳು ನನಗರಿವಿಲ್ಲದಂತೆ ಉರುಳಿದ್ದವು.
ಫೋನ್ ನಲ್ಲಿ ನನ್ನ ದ್ವನಿ ಕೇಳಿದಾಗ ನಿನಗಾದ ಆನಂದ ನಿನ್ನ ದ್ವನಿಯಲ್ಲೇ ನನಗೆ ತಿಳಿಯುತ್ತಿತ್ತು.''ರಾಜಕ್ಕಾ,ಎಷ್ಟಲ್ಲಾ ದಿವ್ಸಾಗೊತೆ ಮಾರಾಯ್ತಿ...ಆನು ಅವ್ರತ್ರೆ ಹೇಳ್ತಾ ಇದ್ದಿದ್ದಿ... ರಾಜಕ್ಕನ ಫೋನೇ ಇಲ್ಲೆ ಹೇಳಿ..ಕರ್ರೆಕ್ಟಾಗಿ ನಾಲ್ಕು ತಿಂಗಳ ಮೇಲಾತು ನೋಡು.'' ಎಂದು ನೀನು ಲೆಕ್ಕವಿಟ್ಟು ಹೇಳಿದಾಗ,ನೀನು ನನ್ನ ಫೋನ್ ಗಾಗಿ ಎಷ್ಟು ಎದುರು ನೋಡುತ್ತಿದ್ದೆ ಎಂದು ಅರಿವಾದಾಗ ನೋವಾಯಿತು.ನನ್ನ ಮೇಲೇ ನನಗೆ ಕೋಪ ಬಂತು.''ನಿಂಗೆ ಫೋನ್ ಮಾಡನ ಅಂದ್ರು ಫೋನ್ ಹೋಗ್ತಿಲ್ಲೆ '' ಎಂದ ನಿನ್ನ ಅಸಹಾಯಕತೆಗೆ ಎನುತ್ತರಿಸಬೇಕೆಂದು ತಿಳಿಯದೆ ಧ್ವನಿ ಮೂಕವಾಯಿತು.
ಚಿಕ್ಕಂದಿನಿಂದ ನನ್ನನ್ನು ನಿನ್ನ ನಾಲ್ಕನೆ ಮಗಳಂತೆ ಸಾಕಿದ ನೀನು,ನನ್ನಿದ ಒಂದು ಫೋನ್ ಕರೆಯನ್ನು ನಿರೀಕ್ಷಿಸುವುದು ತಪ್ಪಲ್ಲ.ನಿನ್ನ ಕೋಪವೆಲ್ಲ ಒಂದೇ ಒಂದು ಮಾತಿನಲ್ಲಿ ಹೊರ ಹಾಕಿದೆಯಲ್ಲ ಆಯೀ.'' ನಿಂಗೆ ಕುಂಡೆ ದೊಡ್ಡ ಮಾಡವರಿಗೆ ಮಾತ್ರ ಬೇಕು,ಕಡಿಗೆಲ್ಲ ಮರ್ತೊಗ್ತು ಅಲ್ದ !!!'' . ನನ್ನ ಮೇಲೆ ನಾನು ಕೊಪಿಸಿಕೊಳ್ಳಬೇಕೋ,ಅಥವಾ ನಿನಗೆ ಸಮಾಧಾನ ಹೇಳಬೇಕೋ ಎಂದು ತಿಳಿಯದೆ ಮತ್ತೆ ಮೌನಿಯಾದೆ.
ಮಕ್ಕಳು,ಮೊಮ್ಮಕ್ಕಳು ಬರುತ್ತಾರೆಂದು ನೀನು ಕಾದಿಡುತ್ತಿದ್ದ ಲಾಡು,ಅದನ್ನು ನಾವೆಲ್ಲಾ ಬಂದಾಗ ''ಮೊನ್ನೆ ಹಬ್ಬಕ್ಕೆ ಮಾಡಿದ ಲಾಡು,ತಿಂತ್ಯ ಮಗಾ'' ಎನ್ನುತ್ತಾ ತೆಗೆದು ಕೊಡುತ್ತಿದ್ದ ನಿನ್ನ ಪ್ರೀತಿಯನ್ನು ಮರೆಯಲಾದೀತೇ ಆಯೀ...ನಾನು ಚಿಕ್ಕವಳಿದ್ದಾಗಿನ ನೀನು ಹೇಳುವ ಕಥೆಗಳನ್ನ ಮರೆಯಲಾದೀತೇ.. ನನಗೆ ಕೆಮ್ಮು ಶುರುವಾದಾಗ ನೀನು ಮಾಡಿ ಕೊಡುತ್ತಿದ್ದ ಅರಿಶಿನ ಕಷಾಯವನ್ನು ಹೇಗೆ ಮರೆಯಲಿ ಆಯೀ..ನಾನು ಬಂದ ಕೂಡಲೇ ಓಡಿ ಬಂದು ತಬ್ಬಿಕೊಳ್ಳುವ ನನ್ನ ಪ್ರೀತಿಯ ಅಜ್ಜಿ ನೀನು.
ಹಾಂ.. ಅಜ್ಜಿ ಎಂದಾಗ ನೆನಪಾಯಿತು.ನಿನಗೆ ನಿನ್ನ ಮೊಮ್ಮಕ್ಕಳು ಅಜ್ಜಿ ಎಂದು ಕರೆದರೆ ಕೋಪ ಬರುತ್ತಿತ್ತು ಅಲ್ಲವಾ..ಅದಕ್ಕೆ ಅಲ್ಲವಾ ನಿನ್ನ ನಾವೆಲ್ಲ ಆಯೀ ಎಂದು ಕರೆಯುವುದು.. ನಿನಗೆ ಅಜ್ಜಿ ಎಂದು ಕರೆದರೆ ಸೂಟ್ ಆಗುವುದಿಲ್ಲ ಬಿಡು.ಈ ವಯಸ್ಸಿನಲ್ಲಿಯೂ ಹುಡುಗಿಯ ತರಾ ಇದ್ದೀಯ. ನಾನು ನಿನ್ನ ಮಕ್ಕಳಿಗೆ ರೇಗಿಸುವುದುಂಟು.ಆಯಿಯ ಸೌಂದರ್ಯ ನಿಮ್ಮ ಮೂವರು ಹೆಣ್ಣುಮಕ್ಕಳಲ್ಲಿ ಯಾರಿಗೂ ಬಂದಿಲ್ಲ ಎಂದು.ಬರಿ ಸೌಂದರ್ಯ ಮಾತ್ರವಲ್ಲ.ನಿನ್ನ ಅಜ್ಜನ ದಾಂಪತ್ಯ ನಮಗೆಲ್ಲ ಆದರ್ಶ. ಅಜ್ಜ ಎಷ್ಟು ಬೇಗ ಎದ್ದು ದೇವರ ಪೂಜೆಗೆ ಬಂದರೂ,ಅವನಿಗಿಂತ ಮೊದಲು ನೀನೆದ್ದು ದೇವರ ಮುಂದೆ ಸ್ವಚ್ಛ ಮಾಡಿಕೊಡುವುದು,ದೇವರಿಗೆ ಹೂ ಕೊಯ್ದಿಡುವುದು,ಎಲ್ಲೇ ಹೋಗುವುದಾದದರೂ ಅಜ್ಜನಿಗೆ ಅಡಿಗೆ ಮಾಡಿಟ್ಟು ಹೋಗುವುದು,ಒಬ್ಬರಿಗೊಬ್ಬರು ಆಸರೆಯಾಗಿರುವುದು ನಮಗೆಲ್ಲ ಉದಾಹರಣೀಯ.
ಆಯೀ,ನಿನ್ನ ಮಾತು ಕೇಳಿದ ಖುಷಿಗೋ ,ಅಥವಾ ನಿನ್ನ ಇಷ್ಟು ದಿನ ಕಾಯಿಸಿದ ದುಃಖಕ್ಕೊ ಗೊತ್ತಿಲ್ಲ.ಫೋನ್ ಕೆಳಗಿಟ್ಟ ಘಳಿಗೆ ನನ್ನ ಕಣ್ಣು ಹನಿಗೂಡಿತ್ತು.ಪ್ರತ್ಯುಪಕಾರ ಬಯಸದೆ ನೀನು-ಅಜ್ಜ ಕೊಟ್ಟ ಪ್ರೀತಿಗೆ ಪ್ರತಿಯಾಗಿ ಎನು ಕೊಡಲಿ ಎಂದು ತಿಳಿಯುತ್ತಿಲ್ಲ.ಇಷ್ಟು ದಿನ ನನ್ನಿಂದಾದ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ.ವಾರಕ್ಕೊಮ್ಮೆಯಾದರೂ ಫೋನ್ ಮಾಡುತ್ತೇನೆ.ತಡವಾದರೂ ಸರಿಯೇ.ಈಗ ಹೇಳುತ್ತೇನೆ.
ನೀ ನನ್ನ ಹಡೆದವ್ವನ ಹಾಂಗ.
ಮರೆತೇನೆಂದರೆ ಮರೆಯಲಿ ಹ್ಯಾಂಗ.... !!
Thursday, 24 June 2010
Wednesday, 16 June 2010
ಇದ್ದುದೆಲ್ಲವ ಬಿಟ್ಟು....
ಈ ಜೀವನ ಎಷ್ಟು ವಿಚತ್ರ ಅಲ್ಲವಾ.. ಇವತ್ತು ಬೆಳಿಗ್ಗೆ ಏಳುತ್ತಿದ್ದಂತೆಯೇ ಅನ್ನಿಸಿತು. ಎಂದಿನಂತೆ ಮತ್ತೊಂದು ಬೆಳಗು.ಅದೇ ಅಡಿಗೆ,ಅದೇ ಕೆಲಸ,ಅದೇ routine..ಸ್ವಲ್ಪ ತಡವಾಗಿ ಎದ್ದೆನೇನೋ ಎಂಬ ಆತಂಕ...ಬಹುಶ: ಬೇಗ ಎದ್ದಿದ್ದರೆ ಛೇ ಇನ್ನು ಸ್ವಲ್ಪ ಮಲಗಬಹುದಿತ್ತು ಅನ್ನಿಸುತ್ತಿತ್ತೇನೋ....!!! ಈ ಬದುಕು,ಅದರ ಬಗೆಗಿನ ಯೋಚನೆಗಳು ಕೆಲವೊಮ್ಮೆ ವಿಚಿತ್ರ ಅನ್ನಿಸುವಷ್ಟು ವಿಚಿತ್ರವಾಗಿರುತ್ತವೆ....ಎಷ್ಟೋ ಬಾರಿ ಅರ್ಥವಾಗದಷ್ಟು!
ಎಷ್ಟೋ ಸಾಗರದಾಚೆ ದೂರದಲ್ಲಿ ಕುಳಿತಾಗ ಮತ್ತೆ ಮತ್ತೆ ಕಾಡುವ ಮನೆಯ ನೆನಪು.ಹಸಿರು ತಂಪಾದ ಅಡಿಕೆ ತೋಟದ ತರಗೆಲೆಗಳ ಮಧ್ಯೆ ಆಟವಾಡಿದ್ದು...ಅಕ್ಕ ತಮ್ಮಂದಿರ ಜೊತೆ ಜಗಳವಾಡಿದ್ದು,ಮತ್ತೆ ಒಂದಾಗಿ ನಲಿದಿದ್ದು.ಅಪ್ಪ ಪೇಟೆಗೆ ಹೋದರೆ ಬರುವಾಗ ಏನಾದರೂ ತರುತ್ತಾರೆ ಎಂದು ಅವರ ಬರುವನ್ನೇ ಕಾದು ಕುಳಿತಿದ್ದು,ಬೆಳಿಗ್ಗೆ ಅಮ್ಮ ಮಾಡಿದ ಗರಿ ಗರಿ ತೆಳ್ಲೆವು (ದೋಸೆ) ಸವಿದಿದ್ದು,ಕೆಲವೊಮ್ಮೆ ಅದು ಬೇಡವೆನಿಸಿ ಅಪ್ಪನ ಜೊತೆ ಪೇಟೆಗೆ ಹೋಗಿ ಮಸಾಲೆ ದೋಸೆ ತಿಂದು ಬಂದದ್ದು,ಇವತ್ತು ಮಾಯಾನಗರಿಯಲ್ಲಿ ಬೇಕೆನಿಸಿದ್ದು ಸಿಗುವಂತಿದ್ದರೂ ಒಮ್ಮೊಮ್ಮೆ ಯಾವುದೂ ಬೇಡ ಎನ್ನುವಷ್ಟು ನಿರ್ಲಿಪ್ತತೆ ! ಜೀವನ ಎಂದರೆ ಇಷ್ಟೇನಾ ಎನ್ನಿಸುವಷ್ಟು ಬೇಸರ,ದುಗುಡ !!!
ಹಸಿರು ಸೀರೆಯುಟ್ಟ ಸುಂದರ ಪ್ರಕೃತಿಯ ಮಡಿಲಲ್ಲಿ..ನಡೆದಷ್ಟೂ ಬಾರದ,ಸವೆಸಿದಷ್ಟೂ ಸವೆಯದ ಶಾಲೆಗೆ ಹೋಗುವ ಮಣ್ಣು ದಾರಿಯಲ್ಲಿ.. ಗೆಳತಿಯರ ಜೊತೆಯ ಹರಟೆಯಲ್ಲಿ ಮನಸ ಅಂಚನ್ನು ಹಾದು ಹೋಗುತ್ತಿದ್ದ, ಒಮ್ಮೊಮ್ಮೇ ಮನಸಲ್ಲೇ ಉಳಿದು ಕಾಡುತ್ತಿದ್ದ ಅದೆಷ್ಟೋ ಕನಸುಗಳು ಇದೇನಾ..?
ಅಂದು ಕನಸು ಕಾಣುತ್ತಿದ್ದ ಇದೇ ಮನಸ್ಸು ಇಂದು heater ಅಡಿಯಲ್ಲಿ ಬೆಚ್ಚಗೆ ಮಲಗುವ ಸಂತೃಪ್ತ ಮನೆಯಲ್ಲಿ, ಬಣ್ಣಬಣ್ಣದ ಹೂಗಳ ಪಾರ್ಕ್ ನ ಕೃತಕ ಕಾರಂಜಿಗಳ ಮದ್ಯೆ, ಗುರಿ ಮುಟ್ಟುವ ತವಕದಲ್ಲಿ ಒಂದೇ ಸವನೆ ಓಡಾಡುವ ರೈಲುಗಳ ನಿಲ್ದಾಣದ ಬೆಂಚಿನಲ್ಲಿ, ಬೇಡವೆನಿಸಿದರೂ ಕೇಳಲೇ ಬೇಕೆಂಬಂತೆ ಕಿವಿಗೆ ತಟ್ಟುವ ಪಾಶ್ಚಾತ್ಯ ಸಂಗೀತದ ನಡುವೆ, ಇತಿಹಾಸದ ಪುನರಾವರ್ತನೆ ಆದಂತೆ ಭಾಸವಾಗುವ ಮಿನಿ ಉಡುಗೆ ಸಂಸ್ಕೃತಿಯ ಬಿಕಿನಿ ಸನ್ನಿವೇಶದ high heel ಪರಿಸರದಲ್ಲಿ, ಮಧ್ಯವನ್ನು ನೀರಿನಂತೆ ಸೇವಿಸುವ ಜನರ ಮದ್ಯೆ,ಏನೂ ಬೇಡವೆಂಬಂತೆ ಕಾಡುವ ಸ್ಥಿತಿ ಕಂಡಾಗ, ಅನುಬವಿಸುವಾಗ ಮತ್ತದುವೆ ಪಶ್ನೆ. Am I living the dream ??? !!!
ಈಗ ಎಷ್ಟೋ ಸಲ ಅನಿಸಿದ್ದುಂಟು.ನಾನು ಎಲ್ಲ ಇದ್ದರೂ ಏನು ಇಲ್ಲದಂತಿದ್ದೆ. ನನ್ನವರೆಲ್ಲ ಜೊತೆಯಲ್ಲಿದ್ದರು.ನನ್ನ ಮಿತ್ರರಿದ್ದರು.ಬಂಧುಗಳಿದ್ದರು.ಎಸ್ಟೋ ಸಲ ಯಾರಾದರೂ ಮನೆಗೆ ಕರೆದರೆ ಸುಳ್ಳು ನೆಪ ಹೇಳಿ ತಪ್ಪಿಸಿಕೊಂಡಿದ್ದುಂಟು.ಸ್ನೇಹಿತರು ಸಿಗು ಎಂದರೆ ಬಿಡುವಿಲ್ಲದ ಕೆಲಸದ ನೆಪ ಹೇಳಿದ್ದುಂಟು...ಒಂದಂತು ಸತ್ಯ.ಜೀವನದಲ್ಲಿ ನಮಗೆ ಬೇಕೆನಿಸಿದಾಗ ಬೇಕೆನಿಸಿದ್ದು ಸಿಗುವುದಿಲ್ಲ.ಅದು ನಮ್ಮ ಜೊತೆ ಇದ್ದಾಗ ಅದರ ಮಹತ್ವ ನಮಗೆ ತಿಳಿದಿರುವುದಿಲ್ಲ.
ಇದಕ್ಕೆ ಹಿರಿಯರು ಹೇಳಿರಬೇಕು.'' 'ಇದ್ದುದೆಲ್ಲವ' ಬಿಟ್ಟು 'ಇಲ್ಲದುದ' ರೆಡೆಗೆ ತುಡಿಯುವುದೇ ಜೀವನ.''

Monday, 7 June 2010
Favourite....
ನಿಮ್ಮ favourite ಯಾವುದು? ಅಂದ ತಕ್ಷಣ ಒಂದು ದೊಡ್ಡ ಲಿಸ್ಟೇ ತಯಾರಾಗಿರುತ್ತದೆ.ಅದು ಹಾಡಿರಲಿ,ಸಿನಿಮಾ ಇರಲಿ,ಪುಸ್ತಕ ಇರಲಿ...ಯಾವುದಾದರೂ ಸರಿಯೇ.ದೊಡ್ಡ ಲಿಸ್ಟ್ ಅಂತು ತಯಾರಾಗಿರುತ್ತದೆ ಹೇಳಲಿಕ್ಕೆ.
ಕೆಲವರಿಗೆ ನಾಯಿ ಅಂದರೆ ಇಷ್ಟ. ಇಷ್ಟ ಅಂತ walking ಗೆ ಕರೆದುಕೊಂಡು ಹೋಗೋದನ್ನ ನೋಡಿದ್ದೀನಿ ಕೇಳಿದ್ದೀನಿ ಬೆಂಗಳೂರಿನಲ್ಲಿ.ಆದ್ರೆ ನಾಯಿ favourite ನ ಅತಿರೇಕ ನೋಡಿದ್ದು UK ಗೆ ಬಂದ ಮೇಲೆ.ಕೆಲವರಂತೂ ಅದರ ಮೂತಿಗೆ ಮುತ್ತನ್ನಿಕ್ಕುತ್ತಾರೆ.ಒಂದು ದಿನ ಬಸ್ ನಲ್ಲಿ ನನ್ನ ಮುಂದೆ ಒಂದು ಹುಡುಗಿ ಬಂದು ಕೂತಳು.ಮೊದಲು ಅವಳ ಹೊಟ್ಟೆ ನೋಡಿ pregnant ಇರಬಹುದೇನೋ ಅಂದುಕೊಂಡೆ.ಆಮೇಲೆ ಅವಳ sweater ಒಳಗಿಂದ ನಾಯಿ ಮರಿ ಇಣುಕಿದಾಗ ನನಗೆ ಶಾಕ್. ಶಾಕ್ ನಿಂದ ಹೊರ ಬಂದು ಅದು ಏನು ಅಂತ ಅರ್ಥ ಆಗೋಕೆ ಸ್ವಲ್ಪ ಸಮಯ ಹಿಡೀತು .ಆಕೆ ನಾಯಿ ಮರಿಗೆ ಚಳಿ ಆಗುತ್ತೆ ಅಂತ ಅದನ್ನ ತನ್ನ sweater ಒಳಗೆ ಹಾಕಿ zip ಎಳೆದುಕೊಂಡಿದ್ದಳು.ನಮ್ಮ ದೇಶದಲ್ಲಿ ಮಕ್ಕಳನ್ನು ಕೂಡ ಅಸ್ಟು ಚನ್ನಾಗಿ ನೋಡಿಕೊಳ್ಲೋದಿಲ್ಲ ನಾವು. ಏನೇ ಇರ್ಲಿ, UK ಲಿ ಹುಟ್ಟೋ ನಾಯಿ ಕೂಡ ಪುಣ್ಯ ಮಾಡ್ಕೊಂಡು ಹುಟ್ಟಿರತ್ವೆ ಅನ್ನಿಸ್ತು .
ಕೆಲವರಿಗೆ ಕ್ರಿಕೆಟ್ ನೋಡುವುದು ಇಷ್ಟ.ನನ್ನ ತಮ್ಮ ಆ ಕ್ರಿಕೆಟ್ ಪ್ರೇಮಿಗಳಲ್ಲಿ ಒಬ್ಬ.ಹೋದಲ್ಲೆಲ್ಲ ಬ್ಯಾಟ್ಟಿಂಗ್,ಬೌಲಿಂಗ್ ಸ್ಟೈಲ್ ಮಾಡಿಕೊಂಡು,ಓಡಾಡುವುದು.ಕ್ರಿಕೆಟ್ players ನ ಚಿತ್ರ ಕತ್ತರಿಸಿ ಸಂಗ್ರಹ ಮಾಡೋದು,ಗೋಡೆಗೆ ಬಾಲ್ ಕುಟ್ಟಿ ಪ್ರಾಕ್ಟೀಸ್ ಮಾಡೋದು ಅಂದರೆ ಅವನಿಗ ತುಂಬಾ ಇಷ್ಟ ಆಗಿತ್ತು.ಅವನಿಗೆ ಎಷ್ಟು ಇಷ್ಟ ಆಗಿತ್ತು ಅಂದರೆ ಕೂತಲ್ಲಿ ನಿಂತಲ್ಲಿ commentary ಹೇಳೋದು ಕ್ರಿಕೆಟ್ ಮ್ಯಾಚ್ TV ಲಿ ಬಂದರೆ ಕಿರುಚಡೋದು... ಅವನ ಆ ಕಾಟಕ್ಕೆ ನನಗೆ ಕ್ರಿಕೆಟ್ ಅಂದರೆ ಆಗುತ್ತಿರಲಿಲ್ಲ.
ನನ್ನ ಪತಿರಾಯರಿಗೂ ಕೆಲವು favourites ಇದೆ.ಅದರಲ್ಲಿ ನನಗೆ most irritating ಅಂದರೆ Prince of Persia ಗೇಮ್.ಕಂಪ್ಯೂಟರ್ ಮುಂದೆ ಕೂತರೆ ಸಾಕು.ಇಡಿ ದಿನ ಬೇಕಾದರೂ ಆ ಗೇಮ್ ಆಡುತ್ತಾರೆ.ಇನ್ನೊಂದು ಅಂದ್ರೆ Two And a half men serial (ನಮ್ಮನೇಲಿ TV ಇಲ್ಲದ ಕಾರಣ serial ,movies ಎಲ್ಲ download ಮಾಡಿ ನೋಡುತ್ತೇವೆ ).ಈ ಧಾರವಾಹಿಯಂತು ದಿನಕ್ಕೆ (ರಾತ್ರಿ 8-10 .30 ) ಎಷ್ಟು episodes ಆಗುತ್ತದೆಯೋ ನಾನು ಕಾಣೆ.ಕೊನೆಗೆ ನನಗೆ ನಿದ್ದೆ ಬಂತು ಮಲಗುತ್ತೀನಿ ಎಂದು ನಟಿಸುವ ವರೆಗೂ ಅದಕ್ಕೆ ಬ್ರೇಕ್ ಇಲ್ಲ.
ನನ್ನದೂ ಬಹಳ favourites ಇದೆ. ಅದು ಬೇರೆಯವರಿಗೆ ಹೇಗನ್ನಿಸುತ್ತದೆ ಅಂತ ನನಗೂ ಗೊತ್ತಿಲ್ಲ. !!!!
ಎಲ್ಲರಿಗು ಅವರವರ ಇಷ್ಟ ಇದ್ದೇ ಇರುತ್ತದೆ.ಇಷ್ಟದ ವಿರುದ್ದ ಹೋಗುವುದು ಬಹಳ ಕಷ್ಟ.ಆದರೆ ನಿಮ್ಮ ಇಷ್ಟ ಮಿತಿ ಮೀರದಂತೆ ನೋಡಿಕೊಲ್ಲಬಹುದಲ್ಲಾ.. ಇಲ್ಲದಿದ್ದರೆ ಬೇರೆಯವರಿಗೆ ಈ favourite ಅಂತ ಯಾಕಿರುತ್ತದೆಯೋ ಅನ್ನಿಸೋದಂತು ನಿಜ. :)

ನೀ ನನ್ನ ಜೀವ.....
ನಿನ್ನ ಮೊದಲ ಸಲ ನೋಡಿದಾಗ
ನೀ ನನ್ನ ಜೀವ ಎಂದೆನಿಸಿತ್ತು
ಜನುಮಾಂತರಗಳಿಂದ ಜೊತೆಗಿದ್ದೆವೇನೂ ಅನಿಸಿತ್ತು
ನಿನ್ನ ಜೊತೆ ಮಾತನಾಡಿದ ಆ ನಾಲ್ಕು ಕ್ಷಣಗಳಲ್ಲಲ್ಲಿ
ನೀ ನನ್ನ ಜೀವದ ಗೆಳತಿಯರಿಗಿಂತ ಆತ್ಮೀಯನೆನಿಸಿತ್ತು
ನಿನಗಿಂತ ಬೇರೆ ಬಂಧು ಬೇಕೇ ? ಅನಿಸಿತ್ತು
ನಿನ್ನ ಜೊತೆ ಕೈ ಹಿಡಿದು ನಡೆದಾಗ
ಎಲ್ಲವನ್ನು ಗೆಲ್ಲಬಲ್ಲೆ ಅನಿಸಿತ್ತು
ಈ ಜಗತ್ತೆಲ್ಲಾ ನನ್ನದೆನಿಸಿತ್ತು
ನೀ ಚುಂಬಿಸಿದಾಗ
ನನ್ನ ಮನಸ್ಸು ಕನಸಿನ ಲೋಕದಲ್ಲಿ ಚಲಿಸಿತ್ತು
ಹಳೆಯ ಕನಸೊಂದು ಚಿಗುರೊಡೆದು ಹರಿದಿತ್ತು
ನಿನಗಾಗಿ ತಪಸ್ವಿನಿಯಂತೆ ಕಾದ
ಆ ನಾಲ್ಕು ವರುಷಗಳು ಶತಮಾನಗಳಂತೆ ಅನಿಸಿತ್ತು
ನೀ ಜೋತೆಯಿರುವಾಗ ದಿನಗಳು ಕ್ಷಣಗಳಂತೆ ಉರುಳಿತ್ತು
ಪ್ರೀತಿಯಿಂದ ನನಗಾಗಿ ನೀ ತಂದ ಉಡುಗೊರೆ ನೋಡಿದಾಗ
ನನ್ನ ಕೋಪವೆಲ್ಲ ಕರಗಿತ್ತು
ಇನಿಯಾ,ನಿನಗಿಂತ ಬೇರೆ ಉಡುಗೊರೆ ಬೇಕೇ..? ಎಂದು ಹೇಳಬೇಕೆನಿಸಿತ್ತು
ನಿನ್ನ ಜೊತೆ ಸಪ್ತಪದಿ ತುಳಿದಾಗ
ಓ ಜೀವವೇ,ಕೊನೆಗೂ ದೊರಕಿದೆಯಾ ಅನಿಸಿತ್ತು
ಏಳೇಳು ಜನುಮಕ್ಕೂ ನಿನ್ನ ಜೊತೆಯಾಗಿರಬೇಕು ಅನಿಸಿತ್ತು

Friday, 26 February 2010
ನೆನಪು... ದಿ ಫೂಟ್ ಪ್ರಿಂಟ್ಸ್
ಯಾರೂ ನೆನಪುಗಳಿಗೆ ಹೊರತಾಗಿಲ್ಲ.. ಈ ನೆನಪುಗಳಿಗೆ ಬಹಳ ಶಕ್ತಿಯಿದೆ...ಈ ನೆನಪುಗಳಿಗೆ ನಗಿಸುವ ಸಾಮರ್ಥ್ಯವಿದೆ,ಹಾಗೆ ಅಳಿಸುವ ಸಾಮರ್ತ್ಯವೂ ಇದೆ .ಇಂತಹ ನೆನಪುಗಳಿದ್ದರೆ ಸಾಕು, ನನ್ನ ಜೀವನ ಒಂಟಿಯಾಗಿ ನಡೆಸಬಲ್ಲೆ ಎನ್ನುವ ಧೈರ್ಯ ಕೊಡುವ ನೆನಪುಗಳು... ಯಾಕಾದರೂ ದೇವರು ನೆನಪಿನ ಶಕ್ತಿ ಕೊಟ್ಟಿದ್ದಾನೆ ಮನುಷ್ಯನಿಗೆ ಅನ್ನುವಂತ ನೆನಪುಗಳು...
ನಮ್ಮ ಜೀವನದಲ್ಲಿ ನೂರಾರು ಘಟನೆಗಳು ನಡೆಯುತ್ತವೆ.ನೂರಾರು ಹೊಸ ಮುಖಗಳ ಪರಿಚಯವಾಗುತ್ತದೆ.ಕೆಲವರು ನಮ್ಮೊಂದಿಗೆ ನಮ್ಮ ನೆನಪುಗಳೊಂದಿಗೆ ಚಿರಕಾಲ ಉಳಿಯುತ್ತಾರೆ.ಕೆಲವರು ನೆನಪಿನದಿಯಲ್ಲಿ ಮಾಸಿ ಹೋಗುತ್ತಾರೆ.ನನ್ನ ಜೀವನದ ನೆನಪಿಡುವಂತ ಘಟನೆಗಳ,ವ್ಯಕ್ತಿಗಳ ಬಗ್ಗೆ ಬರೆಯುವ ಹಾಗು ನಿಮ್ಮೊಂದಿಗೆ ಹಂಚಿಕೊಳ್ಳುವ ಹಂಬಲವೇ ನನ್ನ ಈ ಬ್ಲಾಗ್ ರಚನೆಗೆ ಕಾರಣ.ನೆನಪಿನ ಹೆಜ್ಜೆ ಗುರುತುಗಳನ್ನ ಕಾದಿಡುವ ಒಂದು ಪ್ರಯತ್ನ.
ಇಂತಿ,
ರಾಜೇಶ್ವರಿ

Friday, 12 February 2010
ಪರಿಚಯ..
ಹೇಗೆ ಶುರು ಮಾಡಲಿ ತಿಳಿಯದು.. ನಾನು ಬರಹಗಾರ್ತಿ ಅಂತು ಅಲ್ಲ..ಸುಮ್ಮನೆ ಒಂದಷ್ಟು ಗೀಚುವ ಮನಸಾಯಿತು.ಗೀಚೋಣಅಂದುಕೊಂಡೆ...ಮೊದಲ 'blog' ಬರೆಯುವ ಖುಷಿ ಒಂದು ಕಡೆಯಾದರೆ ಓದಿದವರು ಏನು ಅಂದುಕೊಳ್ಳುತ್ತಾರೋ ಎನ್ನುವ ಭಯಇನ್ನೊಂದು ಕಡೆ.
ಎಲ್ಲದಕ್ಕೂ ಮೊದಲು ನನ್ನ ಪರಿಚಯ ಹೇಳುತ್ತೇನೆ.ನಾನು ಬಂದಿದ್ದು ಒಂದು ಪುಟ್ಟ ಹಳ್ಳಿಯಿಂದ.ಹೆಸರು ನಂದಿಕಲ್ಲು . .ನಮ್ಮ ಪುಟ್ಟಫ್ಯಾಮಿಲಿ ನಲ್ಲಿ ಇರುವುದು ನಾನು,ಅಪ್ಪ- ಅಮ್ಮ, ಮತ್ತು ನನ್ನ ತಮ್ಮ.ಓದಿದ್ದು M.Sc Microbiology . ಎರಡು ವರ್ಷ Medi Assist ಅನ್ನುವ ಕಂಪನಿ ಯಲ್ಲಿ MIS Analyst ಆಗಿ ಕೆಲಸ ಮಾಡಿದೆ. ಮದುವೆಯಾದದ್ದು ಸಂತೋಷ್ ಹೆಗಡೆ ಅವರನ್ನ.ಈಗಇರೋದು ಲಂಡನ್ ನಲ್ಲಿ.ವೃತ್ತಿ house wife .
ಇನ್ನು ನನ್ನ ಹವ್ಯಾಸ ದ ಬಗ್ಗೆ ಹೇಳಬೇಕೆಂದರೆ ನನಗೆ ಇಂತದ್ದೆ ಅಂತ ಹವ್ಯಸಗಳಿಲ್ಲ ... ಮದುವೆಗೆ ಮೊದಲು ಕೆಲಸಕ್ಕೆಹೋಗುತ್ತಿದ್ದಾಗ ಹವ್ಯಾಸಗಳಿಗೆ ಸಮಯ ಇರಲಿಲ್ಲ.ಈಗ ಸಮಯವಿದೆ,ಆದರೆ ಹವ್ಯಾಸಗಲಿಲ್ಲ.. :D ಹಾಗೆ ನೋಡಿದರೆ ನಾನು ಕಾಲೇಜ್ ಗೆ ಹೋಗುವ ಸಮಯದಲ್ಲಿ ಒಳ್ಳೊಳ್ಳೆ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದೆ.ಹಾಡುವುದು(good Bathroom singer),ಹಾಡುಗಳನ್ನು ಕೇಳುವುದು,ಒಳ್ಳೆಯ ಘಟನೆಗಳು ನಡೆದರೆ ಅದನ್ನು ಡೈರಿ ಅಲ್ಲಿ ಬರೆಯುವುದು,ಚಿತ್ರಬಿಡಿಸುವುದು,ಮೆಹೆಂದಿ ಹಾಕುವುದು,ಪೇಂಟಿಂಗ್,ಹೀಗೆ...
ಆದರೆ ಈಗ ಮದುವೆ ಆದಮೇಲೆ ದಿನವೆಲ್ಲ ಒಂಟಿಯಾಗಿ ಆಲಸ್ಯದಿಂದ ಕಳೆಯುವುದು ಹವ್ಯಾಸವಗಿಬಿಟ್ಟಿದೆ.ಬೆಳಿಗ್ಗೆ ನನ್ನ ಪತಿದೇವರನ್ನು ಆಫೀಸ್ ಗೆ ರೆಡಿ ಮಾಡಿ ಕಳಿಸುವುದು,ಅಡಿಗೆ,cleaning,ಆಮೇಲೆ ಸಂಜೆ ನಮ್ಮವರು ಬರುವ ವರೆಗೂ ಮೂವಿ,ಸಿರಿಯಲ್ ನೋಡಿ ಟೈಮ್ ಪಾಸು ಮಾಡುವುದು ಇದು ನನ್ನ ದೈನಂದಿನ ಚಟುವಟಿಕೆ.Idle Mind is devil's workshop ಅನ್ನುವ ವಾಡಿಕೆಇದೆಯಲ್ಲ.. ಅದು ಅಕ್ಷರಶಃ ಸತ್ಯ...

Subscribe to:
Posts (Atom)