ಆಯೀ,
ಬಹಳ ದಿನಗಳಿಂದ ನಿನ್ನ ಜೊತೆ ಮಾತನಾಡಬೇಕು ಎಂದುಕೊಂಡಿದ್ದೆ .ಸಮಯವಿಲ್ಲ ಎಂದು ಹೇಗೆ ಸುಳ್ಳು ಹೇಳಲಿ? ಬಹುಷಃ ದೇವರು ಒಬ್ಬನನ್ನು ಬಿಟ್ಟರೆ ಬೇರೆ ಯಾರಿಗೂ ಸಮಯದ ಕೊರತೆಯಿಲ್ಲ.ನೀನು ಕಾಯುತ್ತಿರುತ್ತೀಯ ಎಂದು ತಿಳಿದಿತ್ತು.ಆದರೂ ಆಯಿ ಅಲ್ಲವಾ,ಕ್ಷಮಿಸುತ್ತಾಳೆ ಎನ್ನುವ ನಂಬಿಕೆ.ಇಂಗ್ಲೀಷಿನಲ್ಲಿ ಒಂದು ಹೇಳಿಕೆ ಇದೆ.taken it for granted ಎಂದು.ನಿನ್ನ ಪ್ರೀತಿಯನ್ನು ಸಹ ನಾನು ಹಾಗೇ ತೆಗೆದುಕೊಂಡಿದ್ದೆ.ಇಂದು ನಾಳೆ ಎಂದುಕೊಂಡು ನಾಲ್ಕು ತಿಂಗಳುಗಳು ನನಗರಿವಿಲ್ಲದಂತೆ ಉರುಳಿದ್ದವು.
ಫೋನ್ ನಲ್ಲಿ ನನ್ನ ದ್ವನಿ ಕೇಳಿದಾಗ ನಿನಗಾದ ಆನಂದ ನಿನ್ನ ದ್ವನಿಯಲ್ಲೇ ನನಗೆ ತಿಳಿಯುತ್ತಿತ್ತು.''ರಾಜಕ್ಕಾ,ಎಷ್ಟಲ್ಲಾ ದಿವ್ಸಾಗೊತೆ ಮಾರಾಯ್ತಿ...ಆನು ಅವ್ರತ್ರೆ ಹೇಳ್ತಾ ಇದ್ದಿದ್ದಿ... ರಾಜಕ್ಕನ ಫೋನೇ ಇಲ್ಲೆ ಹೇಳಿ..ಕರ್ರೆಕ್ಟಾಗಿ ನಾಲ್ಕು ತಿಂಗಳ ಮೇಲಾತು ನೋಡು.'' ಎಂದು ನೀನು ಲೆಕ್ಕವಿಟ್ಟು ಹೇಳಿದಾಗ,ನೀನು ನನ್ನ ಫೋನ್ ಗಾಗಿ ಎಷ್ಟು ಎದುರು ನೋಡುತ್ತಿದ್ದೆ ಎಂದು ಅರಿವಾದಾಗ ನೋವಾಯಿತು.ನನ್ನ ಮೇಲೇ ನನಗೆ ಕೋಪ ಬಂತು.''ನಿಂಗೆ ಫೋನ್ ಮಾಡನ ಅಂದ್ರು ಫೋನ್ ಹೋಗ್ತಿಲ್ಲೆ '' ಎಂದ ನಿನ್ನ ಅಸಹಾಯಕತೆಗೆ ಎನುತ್ತರಿಸಬೇಕೆಂದು ತಿಳಿಯದೆ ಧ್ವನಿ ಮೂಕವಾಯಿತು.
ಚಿಕ್ಕಂದಿನಿಂದ ನನ್ನನ್ನು ನಿನ್ನ ನಾಲ್ಕನೆ ಮಗಳಂತೆ ಸಾಕಿದ ನೀನು,ನನ್ನಿದ ಒಂದು ಫೋನ್ ಕರೆಯನ್ನು ನಿರೀಕ್ಷಿಸುವುದು ತಪ್ಪಲ್ಲ.ನಿನ್ನ ಕೋಪವೆಲ್ಲ ಒಂದೇ ಒಂದು ಮಾತಿನಲ್ಲಿ ಹೊರ ಹಾಕಿದೆಯಲ್ಲ ಆಯೀ.'' ನಿಂಗೆ ಕುಂಡೆ ದೊಡ್ಡ ಮಾಡವರಿಗೆ ಮಾತ್ರ ಬೇಕು,ಕಡಿಗೆಲ್ಲ ಮರ್ತೊಗ್ತು ಅಲ್ದ !!!'' . ನನ್ನ ಮೇಲೆ ನಾನು ಕೊಪಿಸಿಕೊಳ್ಳಬೇಕೋ,ಅಥವಾ ನಿನಗೆ ಸಮಾಧಾನ ಹೇಳಬೇಕೋ ಎಂದು ತಿಳಿಯದೆ ಮತ್ತೆ ಮೌನಿಯಾದೆ.
ಮಕ್ಕಳು,ಮೊಮ್ಮಕ್ಕಳು ಬರುತ್ತಾರೆಂದು ನೀನು ಕಾದಿಡುತ್ತಿದ್ದ ಲಾಡು,ಅದನ್ನು ನಾವೆಲ್ಲಾ ಬಂದಾಗ ''ಮೊನ್ನೆ ಹಬ್ಬಕ್ಕೆ ಮಾಡಿದ ಲಾಡು,ತಿಂತ್ಯ ಮಗಾ'' ಎನ್ನುತ್ತಾ ತೆಗೆದು ಕೊಡುತ್ತಿದ್ದ ನಿನ್ನ ಪ್ರೀತಿಯನ್ನು ಮರೆಯಲಾದೀತೇ ಆಯೀ...ನಾನು ಚಿಕ್ಕವಳಿದ್ದಾಗಿನ ನೀನು ಹೇಳುವ ಕಥೆಗಳನ್ನ ಮರೆಯಲಾದೀತೇ.. ನನಗೆ ಕೆಮ್ಮು ಶುರುವಾದಾಗ ನೀನು ಮಾಡಿ ಕೊಡುತ್ತಿದ್ದ ಅರಿಶಿನ ಕಷಾಯವನ್ನು ಹೇಗೆ ಮರೆಯಲಿ ಆಯೀ..ನಾನು ಬಂದ ಕೂಡಲೇ ಓಡಿ ಬಂದು ತಬ್ಬಿಕೊಳ್ಳುವ ನನ್ನ ಪ್ರೀತಿಯ ಅಜ್ಜಿ ನೀನು.
ಹಾಂ.. ಅಜ್ಜಿ ಎಂದಾಗ ನೆನಪಾಯಿತು.ನಿನಗೆ ನಿನ್ನ ಮೊಮ್ಮಕ್ಕಳು ಅಜ್ಜಿ ಎಂದು ಕರೆದರೆ ಕೋಪ ಬರುತ್ತಿತ್ತು ಅಲ್ಲವಾ..ಅದಕ್ಕೆ ಅಲ್ಲವಾ ನಿನ್ನ ನಾವೆಲ್ಲ ಆಯೀ ಎಂದು ಕರೆಯುವುದು.. ನಿನಗೆ ಅಜ್ಜಿ ಎಂದು ಕರೆದರೆ ಸೂಟ್ ಆಗುವುದಿಲ್ಲ ಬಿಡು.ಈ ವಯಸ್ಸಿನಲ್ಲಿಯೂ ಹುಡುಗಿಯ ತರಾ ಇದ್ದೀಯ. ನಾನು ನಿನ್ನ ಮಕ್ಕಳಿಗೆ ರೇಗಿಸುವುದುಂಟು.ಆಯಿಯ ಸೌಂದರ್ಯ ನಿಮ್ಮ ಮೂವರು ಹೆಣ್ಣುಮಕ್ಕಳಲ್ಲಿ ಯಾರಿಗೂ ಬಂದಿಲ್ಲ ಎಂದು.ಬರಿ ಸೌಂದರ್ಯ ಮಾತ್ರವಲ್ಲ.ನಿನ್ನ ಅಜ್ಜನ ದಾಂಪತ್ಯ ನಮಗೆಲ್ಲ ಆದರ್ಶ. ಅಜ್ಜ ಎಷ್ಟು ಬೇಗ ಎದ್ದು ದೇವರ ಪೂಜೆಗೆ ಬಂದರೂ,ಅವನಿಗಿಂತ ಮೊದಲು ನೀನೆದ್ದು ದೇವರ ಮುಂದೆ ಸ್ವಚ್ಛ ಮಾಡಿಕೊಡುವುದು,ದೇವರಿಗೆ ಹೂ ಕೊಯ್ದಿಡುವುದು,ಎಲ್ಲೇ ಹೋಗುವುದಾದದರೂ ಅಜ್ಜನಿಗೆ ಅಡಿಗೆ ಮಾಡಿಟ್ಟು ಹೋಗುವುದು,ಒಬ್ಬರಿಗೊಬ್ಬರು ಆಸರೆಯಾಗಿರುವುದು ನಮಗೆಲ್ಲ ಉದಾಹರಣೀಯ.
ಆಯೀ,ನಿನ್ನ ಮಾತು ಕೇಳಿದ ಖುಷಿಗೋ ,ಅಥವಾ ನಿನ್ನ ಇಷ್ಟು ದಿನ ಕಾಯಿಸಿದ ದುಃಖಕ್ಕೊ ಗೊತ್ತಿಲ್ಲ.ಫೋನ್ ಕೆಳಗಿಟ್ಟ ಘಳಿಗೆ ನನ್ನ ಕಣ್ಣು ಹನಿಗೂಡಿತ್ತು.ಪ್ರತ್ಯುಪಕಾರ ಬಯಸದೆ ನೀನು-ಅಜ್ಜ ಕೊಟ್ಟ ಪ್ರೀತಿಗೆ ಪ್ರತಿಯಾಗಿ ಎನು ಕೊಡಲಿ ಎಂದು ತಿಳಿಯುತ್ತಿಲ್ಲ.ಇಷ್ಟು ದಿನ ನನ್ನಿಂದಾದ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ.ವಾರಕ್ಕೊಮ್ಮೆಯಾದರೂ ಫೋನ್ ಮಾಡುತ್ತೇನೆ.ತಡವಾದರೂ ಸರಿಯೇ.ಈಗ ಹೇಳುತ್ತೇನೆ.
ನೀ ನನ್ನ ಹಡೆದವ್ವನ ಹಾಂಗ.
ಮರೆತೇನೆಂದರೆ ಮರೆಯಲಿ ಹ್ಯಾಂಗ.... !!
hey good one......bcs of this reason only i nver forgets to call my"aayi" atleast fortnight once....
ReplyDeleteyeah.. we take our near and dear ones for granted..good you have a habit of calling her at least a fortnight once.. :)
ReplyDeletehi good one..........
ReplyDeleteafter a long time rememebered my granny too..
Swetha,
ReplyDeleteAm glad that u remembered ur granny by reading my letter.. :) I feel purpose of writing this experience of mine is served.. :)
Nice one...hey Raji, ninna ayee Rashine chendake iddu...:)
ReplyDeletehi raji really good posts..and its really nice one after the other.to the truth i did't think that it could have written better than this! keep posting the new things. after seeing ur blog am also decided to scratch my blog page wich has created last year...ha ha. i did't know tat a writer is thr in ur mind. be happy!
ReplyDeleteThank U sooo much Ravisha.. :) i cant express how happy i felt after reading ur comment.. thanks a lot... keep visiting..send me the link of ur blog once you start.. :)
ReplyDeleteThank U Anitha... yaa she is a beauty.. :)
ReplyDeletenanna kannu tumbi bantu ...very nice one raj keep writing ..i never thoght u can be so expressive raj ..hug u ..love u
ReplyDeleteThank U Bhavy :)
ReplyDeleteFirst I thought shez your mom, but then got a doubt which got clarified subsequently. You are fortunate enough to speak to your ajji.. I used to call my ajji as doddamma on either side. My mom's mother passed away before phone facility arrived. What is left over is the memory of playing cards with her & troubling her with pranks as a kid. My dad's mother also passed away last year, snatching away any interaction with her pertaining to her great wisdom of thoughts, stories of vedic & pre-historic times, village songs, etc etc etc... I couldnt record her bank of songs, for which I repent a lot now. If your granny has anything such, I'm sure she would have lots of stuff, a suggestion is next time you go home please gather from her as much wisdom, record her songs, etc.. Long live your granny who has cradled you with so much affection and care..
ReplyDeletehmm bhari chennagi baridye koosakka, I almost cried, I love my ajja and ajji very much:). I miss them a lot.
ReplyDelete@sudarshan
ReplyDeleteThank U so much for your lovely wishes :)sorry to hear that ur grannies are no more :( Dont worry... They are stil with you with those ever green memories..
@Prabha
Thank U soo much koose...even I have cried while writing this..Nanna ajjige odale sikta ilya gottille.. nanna mansige ansiddanna baradi..ninna ajja ajji ge ayushya aarogya ella sigali.. :)
Heart touching story. natural style. ರಾಜಕ್ಕಯ್ಯ ಚೆಂದ ಬರಿತ್ಯೆ. continue ಮಾಡು. ಸದ್ಯ ಊರಿಗೆ ಬರೋದಿದ್ದ ?
ReplyDeleteಥಾಂಕ್ಯೂ ಅಣ್ಣಯ್ಯಾ :) proffessional writer ನಿಂದ ಶಿಪಾರಸು ಸಿಕ್ಕಿದ್ದು ರಾಶಿ ಖುಷಿ ಆತು...:) :) :) ಮುಂದೆ ಬರಿಲಕ್ಕು ಹೇಳ ದೈರ್ಯ ನು ಬಂತು... ಊರಿಗೆ ಸದ್ಯ ಬರ ಆಲೋಚನೆ ಇಲ್ಲೆ ಅಣ್ಣಯ್ಯ.. ಬಂದ್ರೆ ಡಿಸೆಂಬರ್ ಹಂಗೆ ಬರವು.. :)
ReplyDeleteರಾಜೇಶ್ವರಿ ಹ್ಯಾಟ್ಸ್ ಆಪ್..ಅಜ್ಜಿಗೆ ನಿಮ್ಮ ಪ್ರೀತಿಯ ಪ್ರಕಟಮಾಡಲು ಬ್ಲಾಗನ್ನು ಆರಿಸಿದಕ್ಕೆ..ಇಲ್ಲಿ ಬೆಂಗಳೂರಲ್ಲೇ ಇದ್ದು ತಂದೆ ತಾಯಿ ಯನ್ನ ವಿದ್ಧಾಶ್ರಮಕ್ಕೆ ಸೇರಿಸುವ ಉದಾರ ಮಕ್ಕಳೂ ಇದ್ದಾರೆ !! ಅದನ್ನು ನೆನಪಿಸಿಕೊಂಡರೆ...ಹೇಸಿಗೆ ಎನಿಸುತ್ತೆ....ನಿಮ್ಮ ಪ್ರೀತಿ ಗೌರವ ಹಿರಿಯರಲ್ಲಿ ನಿಮ್ಮನ್ನು ಕಾಯುತ್ತೆ.
ReplyDeleteನಿಮ್ಮ ಹೊಗಳಿಕೆ ಹಾಗೂ ಹಾರೈಕೆಗೆ ತುಂಬುಹೃದಯದ ಧನ್ಯವಾದಗಳು ಜಲನಯನ :)
ReplyDelete