ಐದು ವರ್ಷಗಳ ಹಿಂದಿನ ಕಥೆ.ಅಂದು ನನ್ನ M.Sc ಯ ಮೊದಲ ದಿನ.'ಡಿಗ್ರಿ ಮಾಡಿದ್ರೆ ಸಾಕು,ಮದುವೆ ಮಾಡ್ಬಿಟ್ರೆ ಆತು' ಎಂದ ಅಪ್ಪನ ಮಾತನ್ನು ಕೇಳದೆ ಹಠ ಮಾಡಿ ಸೇರಿಕೊಂಡಿದ್ದೆ.ಎಲ್ಲರಂತೆ ನನಗೂ ಸಹ ಭವಿಷ್ಯದ ಬಗ್ಗೆ ಸಾವಿರ ಕನಸುಗಳಿದ್ದವು ಎಂದು ಬೇರೆ ಹೇಳಬೇಕಿಲ್ಲ.(ಆಶ್ಚರ್ಯವೆಂದರೆ ಮೊದಲ ದಿನವೊಂದನ್ನು ಬಿಟ್ಟರೆ ಆ ಕನಸುಗಳು ನಂತರ ಎಲ್ಲಿ ಮಾಯವಾದವೋ ಗೊತ್ತಿಲ್ಲ :)).ಮೊದಲ ದಿನ ಸಹ ನಾನು ತಡವಾಗಿ ಬಂದಿದ್ದೆ.ಕಾಲೇಜಿನಲ್ಲಿ juniors ನ ಸ್ವಾಗತಕ್ಕಾಗಿ ಭರ್ಜರಿ ತಯಾರಿಯೇ ನಡೆದಿತ್ತು.ಇಡೀ ಕಾಲೇಜು ಹೂಗಳಿಂದ ಶ್ರುಂಗಾರವಾಗಿತ್ತು.ನಾನು ಹೋಗುವ ಸಮಯಕ್ಕೆ ಇನ್ನೇನು ಮುಖ್ಯ ಅತಿಥಿಗಳು ಬರುವುದು ಬಾಕಿಯಿತ್ತು.ಬಣ್ಣ ಬಣ್ಣದ ಸೀರೆಯುಟ್ಟ ಹುಡುಗಿಯರು ಬಾಗಿಲಲ್ಲಿ ಹೂಗುಚ್ಛ ಹಿಡಿದು ನಿಂತಿದ್ದರು.ಅರೆ !!! juniors ಗೆ ಇಷ್ಟೊಂದು ಆದರದ ಸ್ವಾಗತ ಮಾಡುತ್ತಿದ್ದಾರಲ್ಲಾ ಎಂದು ನನಗೆ ಮನಸ್ಸಿನಲ್ಲಿಯೇ ಖುಷಿ.ತಡವಾಗಿ ಬಂದಿದ್ದರಿಂತ ಆ ಜನ ಜಂಗುಳಿಯಲ್ಲಿ ನನ್ನ ಗೆಳತಿ ಚೈತ್ರ ಳನ್ನು (ಚೈತ್ರ ನನ್ನ B .Sc ಓದುವಾಗಿನ ಗೆಳತಿ.ಇಬ್ಬರಿಗೂ ಒಂದೇ ಕಾಲೇಜಿನಲ್ಲಿ ಸೀಟ್ ಸಿಕ್ಕಿತ್ತು) ಹುಡುಕುವುದು ಕಷ್ಟದ ಮಾತಾಗಿತ್ತು.ಹಿಂದೆ ಎಲ್ಲೋ ಒಂದು ಕಡೆ ಜಾಗವಿದ್ದಲ್ಲಿ ಕುಳಿತೆ.
ಕಾಲೇಜು chairman , ಮುಖ್ಯ ಅತಿಥಿಗಳು,ಎಲ್ಲ ಕುಯಿದಿದ್ದಾಯಿತು.ಇನ್ನು ಕ್ಲಾಸ್ ಗೆ ಅವರವರ department lecturers ಕರೆದುಕೊಂಡು ಹೋಗುತ್ತಾರೆ ಎಂದು ಘೋಷಿಸಿದರು.placard ಹಿಡಿದು ನಿಂತ ಸೀನಿಯರ್ ಹಿಂದೆ ಸಾಲು ಮಾಡಿ ನಿಂತಿದ್ದಾಯಿತು.ಇದೇನಪ್ಪ ಪ್ರಿಮರಿ ಸ್ಕೂಲ್ culture ಎಂದುಕೊಂಡಿರಾ? ನನಗೂ ಹಾಗೇ ಅನಿಸಿತ್ತು.ಅದು ಹೌದು ಎಂದು ಸಾಬೀತಾಗಲು ಬಹಳ ದಿನ ಹಿಡಿಯಲಿಲ್ಲ್ಲ ಬಿಡಿ.ಪ್ರತಿ ಶನಿವಾರ ಮತ್ತು ಸೋಮವಾರ uniform , ಅರ್ಧ ಘಂಟೆ assembly ಇವೆಲ್ಲ ನಿಜಕ್ಕೂ ನನಗೆ ಪ್ರಿಮರಿ ಸ್ಕೂಲ್ ನ ನೆನಪು ತರಿಸಿದ್ದವು.ನಮ್ಮ ಡಿಪಾರ್ಟ್ಮೆಂಟ್ ಹೆಡ್ ಭಾರತಿ ಮೇಡಂ ಅಂತು ಲೇಡಿ ಹಿಟ್ಲರ್ ಆಗಿದ್ದರು.ಒಂದು ದಿನ ಇಡಿ ಕ್ಲಾಸ್ mass bunk ಮಾಡಿ ಮೂವಿ ಗೆ ಹೋಗಿದ್ದಕ್ಕೆ ಒಂದು ವಾರ ಕ್ಲಾಸ್ ನೆ suspend ಮಾಡಿದ್ದರು.apology ಲೆಟರ್ ಕೊಟ್ಟಿದ್ದ್ದಾಗಿತ್ತು,ಎಲ್ಲರೂ ಹೋಗಿ ಸಾರಿ ಅಂದಿದ್ದಾಗಿತ್ತು.ಊಹುಂ ಜಗ್ಗಲಿಲ್ಲ. ನಾವು ಕೂಡ 'ಬಾರ್ ಬಾರ್ ಹಾಮ್,ಬೋಲ್ ಯಾರ್ ಹಾಮ್,ಅಪನೀ ಜೀತ್ ಹೋ ,ಉನಕಿ ಹಾರ ಹಾಮ್...' ಎನ್ನುತ್ತಾ ಅವರ chamber ಹೊರಗೆ ಕುಳಿತಿದ್ದೆವು.ಎರಡು ದಿನದ ಸತತ ಸತ್ಯಾಗ್ರಹಕ್ಕೆ ಫಲ ಸಿಕ್ಕಿ ಮತ್ತೆ ಕ್ಲಾಸ್ ಶುರು ಆಗಿತ್ತು.
ದಿನ ಕಳೆದಂತೆ ಕ್ಲಾಸ್ ನಲ್ಲಿ ಎಲ್ಲರೂ ಆತ್ಮೀಯರಾಗಿದ್ದರು.ಸದಭಿರುಚಿ ಉಳ್ಳವರು ಜೊತೆಗಿರಲು ಇಷ್ಟ ಪಡುವುದು ಸಹಜ.ಹಾಗೇ ನಮ್ಮದೊಂದು ಗ್ಯಾಂಗ್ ಬೆಳೆದಿತ್ತು.ಆತಿಶ್,ಗುರು,ಪ್ರಶಾಂತ್,ಹರಿನಾಥ್,ಮಲ್ಲಿ,ಶ್ರೀನಿವಾಸ್,ನಾನು,ಚೈತ್ರ,ಭಾವನಾ,ಶೈನಿ ಆ ಗ್ಯಾಂಗ್ ನ members.ಆದರೆ ಆ ಹೆಸರಿನಿಂದ ಯಾರೂ ಯಾರನ್ನೂ ಕರೆಯುತ್ತಿರಲಿಲ್ಲ.ಎಲ್ಲರಿಗೂ ಒಂದೊಂದು ಅಡ್ಡ ಹೆಸರು ಇಟ್ಟಿದ್ದೆವು.ಆ ನಾಮಧೇಯಗಳು ಹೇಗೆ ಬಂದವು ಎಂದು ಒಂದೊಂದಾಗಿ ಹೇಳುತ್ತೇನೆ.
ಪ್ರಶಾಂತ್-ಆಗಿನ್ನೂ ಮೊಬೈಲ್ ನಮಗೆಲ್ಲ ಹೊಸದು.ಅದು ಬೇರೆ ದಿನಕ್ಕೆ ನೂರು ಎಸ್ಸೆಮ್ಮೆಸ್ಸು ಫ್ರೀ ಆಗಿ ಸಿಗುವ ಕಾಲ.ಅದನ್ನೆಲ್ಲ ಹಾಗೇ waste ಮಾಡಬಾರದು ಎಂಬುದು ನಮ್ಮೆಲ್ಲರ ಭಾವನೆ.ಹಾಗಾಗಿ ಕ್ಲಾಸ್ ನಡೆಯುತ್ತಿದ್ದಾಗಲೂ ಎಸ್ಸೆಮ್ಮೆಸ್ಸು ರವಾನೆ ನಡೆಯುತ್ತಿತ್ತು.ನಾನು,ಭಾವನಾ,ಚೈತ್ರ ಒಂದು ಬೆಂಚ್ ನಲ್ಲಿ ಕೂರುತ್ತಿದ್ದೆವು.ಪಾಠ ನಡೆಯುತ್ತಿತ್ತು.ನನ್ನ ಮೊಬೈಲ್ ಗೆ ಪ್ರಶಾಂತ್ ನಿಂದ ಒಂದು ಎಸ್ಸೆಮ್ಮೆಸ್ಸು ಬಂದಿತ್ತು.' Three monkeys sitting together..'.ನನ್ನ ಮೊಬೈಲ್ ನಿಂದ ರಿಪ್ಲೈ ಹೋಗಿತ್ತು..'Ya ya ..One CHIMPANZEE is staring at them ' .ಅಂದಿನಿಂದ ಅವನ ಹೆಸರು 'chimpu '.ಅವನ ನಿಜವಾದ ಹೆಸರು ಏನೆಂದು ಎಲ್ಲರೂ ಮರೆತುಹೊಗಿದ್ದರು.ಇಡೀ ಕ್ಲಾಸ್ ಅವನನ್ನು chimpu ಎಂದೇ ಕರೆಯುತ್ತಿತ್ತು.ಈಗಲೂ ಸಹಾ..
ಗುರು- ಕುಲ್ಲಗಿರುವುದರಿಂದ 'ಕುಳ್ಳ' ಎಂದು ಕರೆಯುತ್ತಿದ್ದೆವು
ಹರಿನಾಥ್-ಕ್ಲಾಸ್ ನಲ್ಲಿ ಎಲ್ಲರ ನೀರು bottle ಕುಡಿದು ಖಾಲಿ ಮಾಡಿದರೂ ಇವನಿಗೆ ನೀರಡಿಕೆ ಕಡಿಮೆ ಆಗುತ್ತಿರಲಿಲ್ಲ.ಹಾಗಂತ ಎಂದೂ ಮನೆಯಿಂದ ನೀರು ತಂದೂ ಗೊತ್ತಿಲ್ಲ.ಹಾಗಾಗಿ ಇವನ ಹೆಸರು 'Waterman '.
ಆತಿಶ್- ಹೋಟೆಲ್ ಗೆ ಹೋದಾಗ ಏನಾದರೂ ಹೆಚ್ಚಾದರೆ ನಾವು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ಆತಿಶ್ ಇದ್ದಾನಲ್ಲ ಎಂದು..ಈ ಡುಮ್ಮನ್ನನಿಗೆ ನಾವಿಟ್ಟ ಹೆಸರು 'ಹಾಥಿ'
ಮಲ್ಲಿಕಾರ್ಜುನ-ಮಲ್ಲಿ ಗೆ ನಾವಿಟ್ಟ ಹೆಸರು ರಾಮಾಚಾರಿ.ಯಾಕೆ ಎಂದು ಮಾತ್ರ ಕೇಳಬೇಡಿ..;)
ಶ್ರೀನಿವಾಸ್-ಮಂಡ್ಯದ ಗೌಡ್ರು.ಅದಕ್ಕೆ ಗೌಡ ಅಥವಾ ಮಂಡ್ಯಾ.
ಚೈತ್ರ- ಸಣ್ಣಕೆ ಇರುವುದರಿಂದ 'ಕಡ್ಡಿ'.ಮತ್ತೆ ಎಲ್ಲರಿಗೂ bun (ಅಂದರೆ ನಮ್ಮ ಭಾಷೆಯಲ್ಲಿ ಬೇಸ್ತು ಬೀಳಿಸುವುದು) ಹಾಕುವುದರಿಂದ ,Bun ರಾಣಿ ಎಂದೂ ಹೆಸರು.
ಭಾವನಾ -ಪಾಪ ಅಷ್ಟೇನು ಹೇಳುವಷ್ಟು ದಪ್ಪ ಇರಲಿಲ್ಲ..ಆದರೂ chimpu ಅವಳಿಗಿಟ್ಟ ಹೆಸರು ಡುಮ್ಮಿ. ಮತ್ತೆ 'ಸ್ಲೀಪಿಂಗ್ ಬ್ಯೂಟಿ' ಎಂದೂ ಕರೆಯುತ್ತಾರೆ. ಸ್ಲೀಪಿಂಗ್ ಬ್ಯೂಟಿ ಹೇಗೆ ಬಂತು ಅಂತೀರಾ..ಭಾವನಾ ಮೇಡಂ ಗೆ ಒಂದು ಅಪೂರ್ವ ಕಲೆ ಇತ್ತು.ಕಣ್ಣು ಬಿಟ್ಟುಕೊಂಡೆ ನಿದ್ದೆ ಮಾಡುವುದು.ಸೆಮಿನಾರ್ ನಲ್ಲಂತೂ ಭಯವಿಲ್ಲದೆ ಪೂರ್ತಿ ಕಣ್ಣು ಮುಚ್ಚಿಯೇ ಬಿಡುತ್ತಿದ್ದಳು.ಯಾಕೆಂದರೆ lecturers ಹಿಂದೆ ಕೂರುತ್ತಿದ್ದರು.ಸೆಮಿನಾರ್ ಮಾಡುವವರು ನಮ್ಮ ಕ್ಲಾಸ್ ನಲ್ಲೆ ಯಾರದರೊಬ್ಬರು.ಮೊದ ಮೊದಲು ಅವಳು ಮಾತ್ರ ನಿದ್ದೆ ಮಾಡುತ್ತಿದ್ದಳು,ಆಮೇಲೆ ಅವಳ ವಿದ್ಯೆ ಇಡೀ ಕ್ಲಾಸ್ ಕಲಿತಿತ್ತು. ನಾನು ಸೆಮಿನಾರ್ ಮಾಡುವಾಗ ನನಗೆ ಇದರ ಅರಿವಾಗಿತ್ತು.ಎಲ್ಲೋ ಒಬ್ಬಿಬ್ಬರು ಮಾತ್ರ ಕಣ್ಣು ತೆರೆದು ಕುಳಿತಿರುತ್ತಿದ್ದರು.
ಶೈನಿ - ಕೇರಳದವಳು ಆದ್ದರಿಂದ 'ಕುಟ್ಟಿ'
ನಾನು-Tommy ಎಂದು ಕರೆಯುತ್ತಾರೆ.ಯಾಕೆ ಎಂದು ಅವರನ್ನೇ ಕೇಳಬೇಕು.. :D
ನಮ್ಮೆಲ್ಲರ common ಅಡ್ಡ ಒಂದಿತ್ತು.ಹೆಸರು ಪ್ರಸಿದ್ದಿ hotel .ದಿನಾ ಕಾಲೇಜು ಮುಗಿದ ತಕ್ಷಣ ಅಲ್ಲಿ ಹೋಗಿ ಮಸಾಲೆ ದೋಸೆ ತಿಂದು ಕಾಫಿ ಕುಡಿಯದಿದ್ದರೆ ಆ ದಿನ ಪರಿಪೂರ್ಣವಲ್ಲ. ಯಾರದ್ದಾದರೂ ಹುಟ್ಟಿದ ಹಬ್ಬ,ಅಥವಾ ಕೊನೆಗೆ ಅವರ ತಾತನ ಹುಟ್ಟಿದ ಹಬ್ಬ ಇದ್ದರೂ ಸಾಕು. ಆದಿನ ಅವರ ಜೋಬಿಗೆ ಕತ್ರಿ ;) ಕಡೆಯ ಪಕ್ಷ ಒಂದು ಜಾಮೂನಾದರೂ ತಿಂದು ಅರ್ಧ ಗಂಟೆ ಅಲ್ಲಿ ಹರಟದಿದ್ದರೆ ಸಮಾಧಾನವಿಲ್ಲ.

ನನ್ನ ಇನ್ನೊಂದು ಮರೆಯಲಾಗದ ಕ್ಷಣವೆಂದರೆ ಈ ಕೊತಿಗಳನ್ನೆಲ್ಲ ನಮ್ಮೂರಿಗೆ ಕರೆದುಕೊಂಡು ಹೋಗಿದ್ದು.chimpu ವಿನ ಕಪಿ ಚೇಷ್ಟೆ ನೋಡಿ ನಮ್ಮೂರಿನ ಕಪಿಗಳೆಲ್ಲ ಓಡಿಹೋಗಿದ್ದವು ಎಂದರೆ ಅತಿಶಯವಾಗಲಾರದು.
ಬರೆಯುತ್ತ ಹೋದರೆ ಹಲವು ಕ್ಷಣಗಳುಂಟು. ಕಣ್ಮುಚ್ಚಿದರೆ ಸಾಕು ಎಲ್ಲ ಈಗ ತಾನೇ ನಡೆದಂತೆ ಕಣ್ಮುಂದೆ ಚಲಿಸುತ್ತವೆ.ಸೆಮಿನಾರ್ ನಲ್ಲಿ ನಿದ್ದೆ ಮಾಡಿದ್ದು,ಕ್ಲಾಸ್ ನಲ್ಲಿ sms ಕಲಿಸುತ್ತಿದ್ದಾಗೆ ಸಿಕ್ಕಿಹಾಕಿಕೊಂಡಿದ್ದು,ಪರೀಕ್ಷೆ ಹತ್ತಿರ ಬಂದಾಗ ಕಂತೆಗಟ್ಟಲೆ notes ನ xerox ತೆಗೆಸಿದ್ದು, ಹಗಲು ರಾತ್ರಿ ಕಷ್ಟ ಪಟ್ಟು ರೆಕಾರ್ಡ್ ಬರೆದಿದ್ದು.combined study ಯ ಹೆಸರಿನಲ್ಲಿ Chai ಮನೆಗೆ ಲಗ್ಗೆ ಇಟ್ಟಿದ್ದು(ಆಂಟಿ ಮಾಡಿದ ರುಚಿ ರುಚಿ ಅಡಿಗೆ ತಿನ್ನಿಬಹುದೆಂದು ;)) .freshers ಪಾರ್ಟಿ ಯಲ್ಲಿ hi hello ಅಂದಿದ್ದು,farewell ಪಾರ್ಟಿ ಯ ದಿನ ಕಣ್ಣೀರು ಸುರಿಸಿದ್ದು...ಯಾರು ಎಲ್ಲೇ ಇದ್ದರೂ ಹೇಗೆ ಇದ್ದರೂ touch ನಲ್ಲಿ ಇರೋಣ ಎಂದು ಪ್ರತಿಜ್ಞೆ ಮಾಡಿದ್ದು......
ನಾವೆಲ್ಲಾ ನಮ್ಮ ನಮ್ಮ ದಾರಿ ಹಿಡಿದು horatu 3 ವರ್ಷಗಳೇ ಆಯಿತು ಎಂದರೆ ನಂಬುತ್ತೀರಾ?
ನನ್ನ ಜೀವದ ಗೆಳೆಯ-ಗೆಳತಿಯರೆ, ನಿಮ್ಮೊಂದಿಗೆ ಕಳೆದ ಕ್ಷಣ ಅಮೂಲ್ಯ.. ನನ್ನ ಜೀವನಕ್ಕೆ ಬಣ್ಣ ದೊರೆತಿದ್ದು ನಿಮ್ಮಿಂದ..ಈ ಬ್ಲಾಗ್ ನಿಮಗಾಗಿ...ನಿಮ್ಮೊಂದಿಗೆ ಕಳೆದ ನೆನಪಿಗಾಗಿ...
Its a celebration when we r together . I miss you guys ... :(


