Monday, 7 June 2010

Favourite....

ನಿಮ್ಮ favourite ಯಾವುದು? ಅಂದ ತಕ್ಷಣ ಒಂದು ದೊಡ್ಡ ಲಿಸ್ಟೇ ತಯಾರಾಗಿರುತ್ತದೆ.ಅದು ಹಾಡಿರಲಿ,ಸಿನಿಮಾ ಇರಲಿ,ಪುಸ್ತಕ ಇರಲಿ...ಯಾವುದಾದರೂ ಸರಿಯೇ.ದೊಡ್ಡ ಲಿಸ್ಟ್ ಅಂತು ತಯಾರಾಗಿರುತ್ತದೆ ಹೇಳಲಿಕ್ಕೆ.

ಕೆಲವರಿಗೆ ನಾಯಿ ಅಂದರೆ ಇಷ್ಟ. ಇಷ್ಟ ಅಂತ walking ಗೆ ಕರೆದುಕೊಂಡು ಹೋಗೋದನ್ನ ನೋಡಿದ್ದೀನಿ ಕೇಳಿದ್ದೀನಿ ಬೆಂಗಳೂರಿನಲ್ಲಿ.ಆದ್ರೆ ನಾಯಿ favourite ನ ಅತಿರೇಕ ನೋಡಿದ್ದು UK ಗೆ ಬಂದ ಮೇಲೆ.ಕೆಲವರಂತೂ ಅದರ ಮೂತಿಗೆ ಮುತ್ತನ್ನಿಕ್ಕುತ್ತಾರೆ.ಒಂದು ದಿನ ಬಸ್ ನಲ್ಲಿ ನನ್ನ ಮುಂದೆ ಒಂದು ಹುಡುಗಿ ಬಂದು ಕೂತಳು.ಮೊದಲು ಅವಳ ಹೊಟ್ಟೆ ನೋಡಿ pregnant ಇರಬಹುದೇನೋ ಅಂದುಕೊಂಡೆ.ಆಮೇಲೆ ಅವಳ sweater ಒಳಗಿಂದ ನಾಯಿ ಮರಿ ಇಣುಕಿದಾಗ ನನಗೆ ಶಾಕ್. ಶಾಕ್ ನಿಂದ ಹೊರ ಬಂದು ಅದು ಏನು ಅಂತ ಅರ್ಥ ಆಗೋಕೆ ಸ್ವಲ್ಪ ಸಮಯ ಹಿಡೀತು .ಆಕೆ ನಾಯಿ ಮರಿಗೆ ಚಳಿ ಆಗುತ್ತೆ ಅಂತ ಅದನ್ನ ತನ್ನ sweater ಒಳಗೆ ಹಾಕಿ zip ಎಳೆದುಕೊಂಡಿದ್ದಳು.ನಮ್ಮ ದೇಶದಲ್ಲಿ ಮಕ್ಕಳನ್ನು ಕೂಡ ಅಸ್ಟು ಚನ್ನಾಗಿ ನೋಡಿಕೊಳ್ಲೋದಿಲ್ಲ ನಾವು. ಏನೇ ಇರ್ಲಿ, UK ಲಿ ಹುಟ್ಟೋ ನಾಯಿ ಕೂಡ ಪುಣ್ಯ ಮಾಡ್ಕೊಂಡು ಹುಟ್ಟಿರತ್ವೆ ಅನ್ನಿಸ್ತು .
 
ಕೆಲವರಿಗೆ ಕ್ರಿಕೆಟ್ ನೋಡುವುದು ಇಷ್ಟ.ನನ್ನ ತಮ್ಮ ಆ ಕ್ರಿಕೆಟ್ ಪ್ರೇಮಿಗಳಲ್ಲಿ ಒಬ್ಬ.ಹೋದಲ್ಲೆಲ್ಲ ಬ್ಯಾಟ್ಟಿಂಗ್,ಬೌಲಿಂಗ್ ಸ್ಟೈಲ್ ಮಾಡಿಕೊಂಡು,ಓಡಾಡುವುದು.ಕ್ರಿಕೆಟ್ players ನ ಚಿತ್ರ ಕತ್ತರಿಸಿ ಸಂಗ್ರಹ ಮಾಡೋದು,ಗೋಡೆಗೆ ಬಾಲ್ ಕುಟ್ಟಿ ಪ್ರಾಕ್ಟೀಸ್ ಮಾಡೋದು ಅಂದರೆ ಅವನಿಗ ತುಂಬಾ ಇಷ್ಟ ಆಗಿತ್ತು.ಅವನಿಗೆ ಎಷ್ಟು ಇಷ್ಟ ಆಗಿತ್ತು ಅಂದರೆ ಕೂತಲ್ಲಿ ನಿಂತಲ್ಲಿ commentary ಹೇಳೋದು ಕ್ರಿಕೆಟ್ ಮ್ಯಾಚ್ TV ಲಿ ಬಂದರೆ ಕಿರುಚಡೋದು... ಅವನ ಆ ಕಾಟಕ್ಕೆ ನನಗೆ ಕ್ರಿಕೆಟ್  ಅಂದರೆ ಆಗುತ್ತಿರಲಿಲ್ಲ.
 
ನನ್ನ ಪತಿರಾಯರಿಗೂ ಕೆಲವು favourites ಇದೆ.ಅದರಲ್ಲಿ ನನಗೆ most irritating ಅಂದರೆ Prince of Persia ಗೇಮ್.ಕಂಪ್ಯೂಟರ್ ಮುಂದೆ ಕೂತರೆ ಸಾಕು.ಇಡಿ ದಿನ ಬೇಕಾದರೂ ಆ ಗೇಮ್ ಆಡುತ್ತಾರೆ.ಇನ್ನೊಂದು ಅಂದ್ರೆ Two And a half men serial (ನಮ್ಮನೇಲಿ TV ಇಲ್ಲದ ಕಾರಣ  serial ,movies ಎಲ್ಲ download ಮಾಡಿ ನೋಡುತ್ತೇವೆ ).ಈ ಧಾರವಾಹಿಯಂತು ದಿನಕ್ಕೆ (ರಾತ್ರಿ 8-10 .30 ) ಎಷ್ಟು episodes ಆಗುತ್ತದೆಯೋ ನಾನು ಕಾಣೆ.ಕೊನೆಗೆ ನನಗೆ ನಿದ್ದೆ ಬಂತು ಮಲಗುತ್ತೀನಿ ಎಂದು ನಟಿಸುವ ವರೆಗೂ ಅದಕ್ಕೆ ಬ್ರೇಕ್ ಇಲ್ಲ.

ನನ್ನದೂ ಬಹಳ favourites ಇದೆ. ಅದು ಬೇರೆಯವರಿಗೆ ಹೇಗನ್ನಿಸುತ್ತದೆ ಅಂತ ನನಗೂ ಗೊತ್ತಿಲ್ಲ. !!!!
ಎಲ್ಲರಿಗು ಅವರವರ ಇಷ್ಟ  ಇದ್ದೇ ಇರುತ್ತದೆ.ಇಷ್ಟದ ವಿರುದ್ದ ಹೋಗುವುದು ಬಹಳ ಕಷ್ಟ.ಆದರೆ ನಿಮ್ಮ ಇಷ್ಟ ಮಿತಿ ಮೀರದಂತೆ ನೋಡಿಕೊಲ್ಲಬಹುದಲ್ಲಾ.. ಇಲ್ಲದಿದ್ದರೆ ಬೇರೆಯವರಿಗೆ ಈ favourite ಅಂತ ಯಾಕಿರುತ್ತದೆಯೋ ಅನ್ನಿಸೋದಂತು ನಿಜ. :)

5 comments:

  1. nija nange en favorite anode martoitu nen blog vododralli .. good one

    ReplyDelete
  2. ondh vishya helala? kelav baari, naavu ulidavrig favourite aagiddanna namagene favourite maadikondbidtheve! Nan vihshyadalli anthandre, shastriya sangeetha, blogging, matte ammana sangada serial nododhu matte oorig hodaga serial bagge atteyandira jothe charche maadodhu sahita!!

    helbeku anthandre, ee favourite annodhu 'contagious' kooda aagbahudu, husharu matte.. [;-)]

    ReplyDelete
  3. hey well written, keep writing:)

    ReplyDelete
  4. @ಸುದರ್ಶನ್ :

    ಹಾ ಹಾ... ನಿಜವಾಗಿಯೂ... its highly contagious... ;) I am already infected.. :D ಮೊದಲು two and half men ನ ಹೇಟ್ ಮಾಡುತ್ತಿದ್ದ ನಾನು ಈಗ ಅದಕ್ಕೆ addict ಆಗಿಬಿಟ್ಟಿದ್ದೇನೆ. ಈಗ ಆ serial ನ ಎಲ್ಲ series ನೋಡಿ ಮುಗಿಯಿತು.ಅದರ ಮೇನ್ character charlie ಯಂತು ಈಗ ಬಹಳ ಮಿಸ್ ಮಾಡಿಕೊಳ್ಳುತ್ತೇನೆ.Prince of Persia ಕೂಡ ಹಾಗೇ.ನಾನು ಆಡದಿದ್ದರೂ ಸಂತೋಷ್ ಆಡುವಾಗ ಹೀಗೆ ಹೋಗು ಹಾಗೇ ಹೋಗು ಎಂದು suggest ಮಾಡುತ್ತಾ ಶುರು ಮಾಡಿದವಳು ಗೇಮ್ ಮುಗಿಯುವ ವರೆಗೂ ಜೊತೆ ಕುಳಿತು ನೋಡುತ್ತಿದ್ದೆ.Forgotten Sands ನ graphics ಹಾಗು ಅದರಲ್ಲಿ ಬಳಸಿದ ಹೊಸ trick ಗಳು ಬಹಳ ಇಷ್ಟವಾಯಿತು.



    @ಪ್ರಭಾ

    ಧನ್ಯವಾದಗಳು.ಬರುತ್ತಿರು :)

    ReplyDelete