Friday, 26 February 2010

ನೆನಪು... ದಿ ಫೂಟ್ ಪ್ರಿಂಟ್ಸ್

ಯಾರೂ ನೆನಪುಗಳಿಗೆ ಹೊರತಾಗಿಲ್ಲ.. ಈ ನೆನಪುಗಳಿಗೆ ಬಹಳ ಶಕ್ತಿಯಿದೆ...ಈ ನೆನಪುಗಳಿಗೆ ನಗಿಸುವ ಸಾಮರ್ಥ್ಯವಿದೆ,ಹಾಗೆ ಅಳಿಸುವ ಸಾಮರ್ತ್ಯವೂ ಇದೆ .ಇಂತಹ ನೆನಪುಗಳಿದ್ದರೆ ಸಾಕು, ನನ್ನ ಜೀವನ ಒಂಟಿಯಾಗಿ ನಡೆಸಬಲ್ಲೆ ಎನ್ನುವ ಧೈರ್ಯ ಕೊಡುವ ನೆನಪುಗಳು... ಯಾಕಾದರೂ ದೇವರು ನೆನಪಿನ ಶಕ್ತಿ ಕೊಟ್ಟಿದ್ದಾನೆ ಮನುಷ್ಯನಿಗೆ ಅನ್ನುವಂತ ನೆನಪುಗಳು...

ನಮ್ಮ ಜೀವನದಲ್ಲಿ ನೂರಾರು ಘಟನೆಗಳು ನಡೆಯುತ್ತವೆ.ನೂರಾರು ಹೊಸ ಮುಖಗಳ ಪರಿಚಯವಾಗುತ್ತದೆ.ಕೆಲವರು ನಮ್ಮೊಂದಿಗೆ ನಮ್ಮ ನೆನಪುಗಳೊಂದಿಗೆ ಚಿರಕಾಲ ಉಳಿಯುತ್ತಾರೆ.ಕೆಲವರು ನೆನಪಿನದಿಯಲ್ಲಿ ಮಾಸಿ ಹೋಗುತ್ತಾರೆ.ನನ್ನ ಜೀವನದ ನೆನಪಿಡುವಂತ ಘಟನೆಗಳ,ವ್ಯಕ್ತಿಗಳ ಬಗ್ಗೆ ಬರೆಯುವ ಹಾಗು ನಿಮ್ಮೊಂದಿಗೆ ಹಂಚಿಕೊಳ್ಳುವ ಹಂಬಲವೇ ನನ್ನ ಈ ಬ್ಲಾಗ್ ರಚನೆಗೆ ಕಾರಣ.ನೆನಪಿನ ಹೆಜ್ಜೆ ಗುರುತುಗಳನ್ನ ಕಾದಿಡುವ ಒಂದು ಪ್ರಯತ್ನ.

ಇಂತಿ,
ರಾಜೇಶ್ವರಿ



3 comments:

  1. ಹಾಯ್,
    ನೆನಪಿನ ಪುಟಗಳ ಬಿಂಬಿಸುವ ನಿಮ್ಮೀ ಬ್ಲಾಗಗಾಗಿ ಅಭಿನಂದನೆಗಳು. ಹೌದಲ, ಕೆಲವು ಬಾಲ್ಯದ ಸುಮಧುರ ನೆನಪುಗಳನ್ನ ನೆನಪಿಸಿಕೊಂಡರೆ ಮನಸ್ಸಿಗೆ ಎಷ್ಟೊಂದು ಉಲ್ಲಾಸ ತರುತ್ತೆ.. ನಿಮ್ಮ ಬ್ಲಾಗ್ ಬೆಳೆದು ಸುಂದರ ಲೇಖನಗಳಿಂದ ಕೂಡಿ ಪ್ರಖ್ಯಾತವಾಗಲಿ ಎಂದು ಹಾರೈಸುತ್ತೇನೆ.
    ಸುದರ್ಶನ್

    ReplyDelete
  2. ಸುದರ್ಶನರವರೇ,

    ನಿಮ್ಮೀ ತುಂಬು ಹೃದಯದ ಅಭಿನಂದನೆಗಳಿಗೆ ನನ್ನ ತುಂಬುಹೃದಯದ ಧನ್ಯವಾದಗಳು.ನಿಮ್ಮಂತ ಪ್ರೋತ್ಸಾಹಿಸುವ ವ್ಯಕ್ತಿಗಳು ಒಬ್ಬಿಬ್ಬರಿದ್ದರೆ ಸಾಕು. ನನ್ನ ಬ್ಲಾಗ್ ಬರಹಗಳಿಗೆ ಜೀವ ತುಂಬುತ್ತದೆ.ಹೀಗೆ ಬರುತ್ತಿರಿ,ಪ್ರೋತ್ಸಹಿಸುತ್ತಿರಿ.

    ಇಂತಿ,

    ರಾಜೇಶ್ವರಿ

    ReplyDelete