Wednesday, 16 June 2010

ಇದ್ದುದೆಲ್ಲವ ಬಿಟ್ಟು....

ಈ ಜೀವನ ಎಷ್ಟು ವಿಚತ್ರ ಅಲ್ಲವಾ.. ಇವತ್ತು ಬೆಳಿಗ್ಗೆ ಏಳುತ್ತಿದ್ದಂತೆಯೇ ಅನ್ನಿಸಿತು. ಎಂದಿನಂತೆ ಮತ್ತೊಂದು ಬೆಳಗು.ಅದೇ ಅಡಿಗೆ,ಅದೇ ಕೆಲಸ,ಅದೇ routine..ಸ್ವಲ್ಪ ತಡವಾಗಿ ಎದ್ದೆನೇನೋ ಎಂಬ ಆತಂಕ...ಬಹುಶ: ಬೇಗ ಎದ್ದಿದ್ದರೆ ಛೇ ಇನ್ನು ಸ್ವಲ್ಪ ಮಲಗಬಹುದಿತ್ತು ಅನ್ನಿಸುತ್ತಿತ್ತೇನೋ....!!! ಈ ಬದುಕು,ಅದರ ಬಗೆಗಿನ ಯೋಚನೆಗಳು ಕೆಲವೊಮ್ಮೆ ವಿಚಿತ್ರ ಅನ್ನಿಸುವಷ್ಟು ವಿಚಿತ್ರವಾಗಿರುತ್ತವೆ....ಎಷ್ಟೋ ಬಾರಿ ಅರ್ಥವಾಗದಷ್ಟು!

ಎಷ್ಟೋ ಸಾಗರದಾಚೆ ದೂರದಲ್ಲಿ ಕುಳಿತಾಗ ಮತ್ತೆ ಮತ್ತೆ ಕಾಡುವ ಮನೆಯ ನೆನಪು.ಹಸಿರು ತಂಪಾದ ಅಡಿಕೆ ತೋಟದ ತರಗೆಲೆಗಳ ಮಧ್ಯೆ ಆಟವಾಡಿದ್ದು...ಅಕ್ಕ ತಮ್ಮಂದಿರ ಜೊತೆ ಜಗಳವಾಡಿದ್ದು,ಮತ್ತೆ ಒಂದಾಗಿ ನಲಿದಿದ್ದು.ಅಪ್ಪ ಪೇಟೆಗೆ ಹೋದರೆ ಬರುವಾಗ ಏನಾದರೂ ತರುತ್ತಾರೆ ಎಂದು ಅವರ ಬರುವನ್ನೇ ಕಾದು ಕುಳಿತಿದ್ದು,ಬೆಳಿಗ್ಗೆ ಅಮ್ಮ ಮಾಡಿದ ಗರಿ ಗರಿ ತೆಳ್ಲೆವು (ದೋಸೆ) ಸವಿದಿದ್ದು,ಕೆಲವೊಮ್ಮೆ ಅದು ಬೇಡವೆನಿಸಿ ಅಪ್ಪನ ಜೊತೆ ಪೇಟೆಗೆ ಹೋಗಿ ಮಸಾಲೆ ದೋಸೆ ತಿಂದು ಬಂದದ್ದು,ಇವತ್ತು ಮಾಯಾನಗರಿಯಲ್ಲಿ ಬೇಕೆನಿಸಿದ್ದು ಸಿಗುವಂತಿದ್ದರೂ ಒಮ್ಮೊಮ್ಮೆ ಯಾವುದೂ ಬೇಡ ಎನ್ನುವಷ್ಟು ನಿರ್ಲಿಪ್ತತೆ ! ಜೀವನ ಎಂದರೆ ಇಷ್ಟೇನಾ ಎನ್ನಿಸುವಷ್ಟು ಬೇಸರ,ದುಗುಡ !!!

 ಹಸಿರು ಸೀರೆಯುಟ್ಟ ಸುಂದರ ಪ್ರಕೃತಿಯ ಮಡಿಲಲ್ಲಿ..ನಡೆದಷ್ಟೂ ಬಾರದ,ಸವೆಸಿದಷ್ಟೂ ಸವೆಯದ ಶಾಲೆಗೆ ಹೋಗುವ ಮಣ್ಣು ದಾರಿಯಲ್ಲಿ.. ಗೆಳತಿಯರ ಜೊತೆಯ ಹರಟೆಯಲ್ಲಿ ಮನಸ ಅಂಚನ್ನು ಹಾದು ಹೋಗುತ್ತಿದ್ದ, ಒಮ್ಮೊಮ್ಮೇ ಮನಸಲ್ಲೇ ಉಳಿದು ಕಾಡುತ್ತಿದ್ದ ಅದೆಷ್ಟೋ ಕನಸುಗಳು ಇದೇನಾ..?

 ಅಂದು ಕನಸು ಕಾಣುತ್ತಿದ್ದ ಇದೇ ಮನಸ್ಸು ಇಂದು  heater ಅಡಿಯಲ್ಲಿ ಬೆಚ್ಚಗೆ ಮಲಗುವ ಸಂತೃಪ್ತ ಮನೆಯಲ್ಲಿ, ಬಣ್ಣಬಣ್ಣದ ಹೂಗಳ ಪಾರ್ಕ್ ನ  ಕೃತಕ ಕಾರಂಜಿಗಳ ಮದ್ಯೆ, ಗುರಿ ಮುಟ್ಟುವ ತವಕದಲ್ಲಿ ಒಂದೇ ಸವನೆ ಓಡಾಡುವ ರೈಲುಗಳ ನಿಲ್ದಾಣದ ಬೆಂಚಿನಲ್ಲಿ, ಬೇಡವೆನಿಸಿದರೂ ಕೇಳಲೇ ಬೇಕೆಂಬಂತೆ ಕಿವಿಗೆ ತಟ್ಟುವ ಪಾಶ್ಚಾತ್ಯ ಸಂಗೀತದ ನಡುವೆ, ಇತಿಹಾಸದ ಪುನರಾವರ್ತನೆ ಆದಂತೆ ಭಾಸವಾಗುವ ಮಿನಿ ಉಡುಗೆ ಸಂಸ್ಕೃತಿಯ ಬಿಕಿನಿ ಸನ್ನಿವೇಶದ high heel ಪರಿಸರದಲ್ಲಿ, ಮಧ್ಯವನ್ನು ನೀರಿನಂತೆ ಸೇವಿಸುವ ಜನರ ಮದ್ಯೆ,ಏನೂ ಬೇಡವೆಂಬಂತೆ ಕಾಡುವ ಸ್ಥಿತಿ ಕಂಡಾಗ, ಅನುಬವಿಸುವಾಗ ಮತ್ತದುವೆ ಪಶ್ನೆ. Am I living the dream ???  !!!

 ಈಗ ಎಷ್ಟೋ ಸಲ ಅನಿಸಿದ್ದುಂಟು.ನಾನು ಎಲ್ಲ ಇದ್ದರೂ ಏನು ಇಲ್ಲದಂತಿದ್ದೆ. ನನ್ನವರೆಲ್ಲ ಜೊತೆಯಲ್ಲಿದ್ದರು.ನನ್ನ ಮಿತ್ರರಿದ್ದರು.ಬಂಧುಗಳಿದ್ದರು.ಎಸ್ಟೋ ಸಲ ಯಾರಾದರೂ ಮನೆಗೆ ಕರೆದರೆ ಸುಳ್ಳು ನೆಪ ಹೇಳಿ ತಪ್ಪಿಸಿಕೊಂಡಿದ್ದುಂಟು.ಸ್ನೇಹಿತರು ಸಿಗು ಎಂದರೆ ಬಿಡುವಿಲ್ಲದ ಕೆಲಸದ ನೆಪ ಹೇಳಿದ್ದುಂಟು...ಒಂದಂತು ಸತ್ಯ.ಜೀವನದಲ್ಲಿ ನಮಗೆ ಬೇಕೆನಿಸಿದಾಗ ಬೇಕೆನಿಸಿದ್ದು ಸಿಗುವುದಿಲ್ಲ.ಅದು ನಮ್ಮ ಜೊತೆ ಇದ್ದಾಗ ಅದರ ಮಹತ್ವ ನಮಗೆ ತಿಳಿದಿರುವುದಿಲ್ಲ.

ಇದಕ್ಕೆ ಹಿರಿಯರು ಹೇಳಿರಬೇಕು.'' 'ಇದ್ದುದೆಲ್ಲವ' ಬಿಟ್ಟು 'ಇಲ್ಲದುದ' ರೆಡೆಗೆ ತುಡಿಯುವುದೇ ಜೀವನ.''
  

20 comments:

  1. idu supper....................quiet acceptable......

    ReplyDelete
  2. ಸವಿ ಸವಿ ನೆನಪು.. ಕನಸು ನೂರು.. ನನಸು ಕೇವಲ ಮೂರು.. But my advice is, try n try more till the rest 97 dreams come true.. ಏನೇ ಆದರೂ ಜೀವನದಲ್ಲಿ ಸಂತೋಷ , ಖುಷಿ ನಿನಗಿರಲಿ ಅಕ್ಕಾ.. ಇದೆ ನಿನ್ನ ತಮ್ಮನ ಮನದಾಳದ ಆಶಯ.. :)

    ReplyDelete
  3. @ವಿನಾಯಕ ನಂದಿಕಲ್ಲು - ಅಕ್ಕನಿಗಾಗಿ ತಮ್ಮನ ಆಶಯ ಸದಾ ಹೀಗೆ ಇರಲಿ.. ತುಂಬು ಹೃದಯದ ಧನ್ಯವಾದಗಳು.

    ಕನಸು ಕಾಣುವುದು ತಪ್ಪಲ್ಲ , ಅದನ್ನು ನನಸಾಗಿಸುವುದೂ ತಪ್ಪಲ್ಲ..ಕನಸು ಕಾಣುವ,ಅದನ್ನು ನನಸಾಗಿಸುವ ಹಂಬಲದಲ್ಲಿ ನಿನ್ನೆದುರಿಗಿರುವ ಸಂತೋಷವನ್ನು ಕಳೆದುಕೊಳ್ಳಬಾರದು ಎನ್ನುವುದು ನನ್ನ ಅನಿಸಿಕೆ..

    ReplyDelete
  4. good attempt.. in simple words said everything...

    ReplyDelete
  5. It's really true:)
    good one.

    Swetha

    ReplyDelete
  6. ಧನ್ಯವಾದಗಳು ಶ್ವೇತಾ :)

    ReplyDelete
  7. Very nice to read.Quite interesting.Every one will look life differently.That is life.Accept wharever is happening and take it as it is(AOL).

    ReplyDelete
  8. ಖಂಡಿತವಾಗಿಯೂ ಡಿಯರ್ Anonymous,ನಿಮ್ಮ ಸಲಹೆಗೆ ಹಾಗು ಹೊಗಳಿಕೆ ನನ್ನ ಧನ್ಯವಾದಗಳು... ಬರುತ್ತಿರಿ.. ಇನ್ನೊಂದು ಬಾರಿ ನಿಮ್ಮ ಅಭಿಪ್ರಾಯ ತಿಳಿಸುವಾಗ ನಿಮ್ಮ ಹೆಸರು ಬರೆಯುತ್ತೀರೆಂದು ಆಶಿಸುತ್ತೇನೆ.. :)

    ReplyDelete
  9. raj super i never thought ur such a good writer, yaro writer bardirotata ide though u have wriiten ur deep feelings wats going n around u it looks like a story , very nice and elegant , impressive , u can be a writer actually

    ReplyDelete
  10. Thanks a lot Bhavy.. thats a big complement.. am touched :)keep visiting n encourage me like this..:)

    ReplyDelete
  11. namaskara

    idella yelli kalthri rajeshwariavare thumba chennagidhe. thamma allina anisike hagu anubhavagalannu sada heege hanchikoltha baraiodhanna nillisa bedi aitha.

    really nice madam

    ReplyDelete
  12. Thanks Prasanna.. :) neevu visit madta iri.. naanu hanchikolta irtini.. :)

    ReplyDelete
  13. Manaswini Santhosh8 July 2010 at 10:26

    ರಾಜೇಶ್ವರಿ ಅದ್ಭುತ ಕಣೆ..ಈ ಕವನದಲ್ಲಿ ಬಹಳ ವಾಸ್ತವಿeಕತೆ ಉಂಟು..ಪ್ರತಿಯೊಂದು ಸಾಲು ಓದುವಾಗ ನನ್ನ ಜೀವನದಲ್ಲಿ ನಡೆದ ಪ್ರಕರಣಗಳು ನೆನಪಾದವು...ಇಂತಹ ಒಳ್ಳೆ topics ಹಾಕ್ತಾ ಇರು..

    ReplyDelete
  14. Thank U manas :) keep visiting.. :)

    ReplyDelete
  15. Its quite ironic in the sense that the sense of importance is realized once we forgo it. ಕೆಟ್ಟ್ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ.. ಎಂಥಹ ವಿಪರ್ಯಾಸ ಅಲ್ವಾ? When we flip through the pages of our memory bank, we always feel 'ಅಯ್ಯೋ ಎಷ್ಟೋಂದೆಲ್ಲ ಮಾಡಬಹುದಿತ್ತಲ್ಲ ಅಂತ.’

    Then when we are away from home and our past, we feel nostalgic and start cribbing. The picture posted containing a creature sitting on the edge of a desolate cliff projects the hopelessness of his solitary state of mind, and is very well chosen.

    I strongly feel we can avoid such condition to some extent at least by avoiding 'moving along with the crowd' attitude.. ಪ್ರತಿ ಒಂದು ಸಂದರ್ಭವನ್ನ ತುಂಬು ಮನಸ್ಸಿನಿಂದ ಸ್ವೀಕರಿಸಿ ಅದರಲ್ಲಿರೋ ಆನಂದವನ್ನ ಸವಿದರೆ, ಬಹುಶಃ ಈ ರೀತಿಯಾದ ಪರೀಸ್ಥಿತಿ ಬರಲಾರದೇನೋ. ಎನಂಬ್ರಿ?

    ReplyDelete
  16. ಖಂಡಿತವಾಗಿಯೂ ಸುದರ್ಶನ್, ನೀವು ಹೇಳಿದ್ದು ಅಕ್ಷರಶಃ ಸತ್ಯ.ನಾವು ದಿನಾ ಬಸ್ ಗೆ ಓಡಾಡುತ್ತಿದ್ದರೆ ನಮ್ಮ ಹತ್ತಿರ ಒಂದು ಬೈಕ್ ಇದ್ದರೆ ಎಷ್ಟು ಚೆನ್ನ ಎನಿಸುತ್ತದೆ.ಬೈಕ್ ಇದ್ದರೆ ಕಾರು ಬೇಕಿತ್ತು ಎನಿಸುತ್ತದೆ.ಸ್ವಿಫ್ಟ್ ಕಾರ್ ಇದ್ದರೆ ಒಂದು BMW ಬೇಕೆನೆಸುತ್ತದೆ.ಅದಿದ್ದವರು ferrari ಯ ಕನಸು ಕಾಣುತ್ತಾರೆ. ಹೀಗೆ ನಮ್ಮ ಆಸೆಗಳಿಗೆ ಕೊನೆಯಿಲ್ಲ.ಕನಸು ಕಾಣುವ ಹಂಬಲದಲ್ಲಿ ನಮ್ಮೊಂದಿಗಿದ್ದವರನ್ನು,ನಮ್ಮಲ್ಲಿದ್ದಿದ್ದನ್ನು ಮರೆಯುತ್ತೇವೆ.ನೀವು ಹೇಳಿದ ಹಾಗೇ ಪ್ರತಿ ಸಂದರ್ಭವನ್ನು ತುಂಬು ಮನಸ್ಸಿನಿಂದ ಸ್ವೀಕರಿಸಿ ಅದರಲ್ಲಿರೋ ಆನಂದವನ್ನು ಅನುಭವಿಸಿದರೆ ಜೀವನ ಸುಂದರ :)

    ReplyDelete